ಫೆ.8ರಂದು ಹಡಗಲಿಯಲ್ಲಿ ಮಾಜಿ ಡಿಸಿಎಂ ಎಂ.ಪಿ.ಪ್ರಕಾಶ್ ಪುಣ್ಯಸ್ಮರಣೆ

MP Prakash
Published on

ಹೂವಿನಹಡಗಲಿ: ಮಾಜಿ ಡಿಸಿಎಂ ಎಂ.ಪಿ.ಪ್ರಕಾಶ್ 10ನೇ ಪುಣ್ಯಸ್ಮರಣೆ ನಿಮಿತ್ತ ಫೆ.8ರಂದು ಮಧ್ಯಾಹ್ನ 12ಗಂಟೆಗೆ ಪಟ್ಟಣದ ಎಂ.ಪಿ. ಪ್ರಕಾಶ್ ಸಮಾಧಿಯ ಹತ್ತಿರ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ರಂಗಭಾರತಿ ಕಾರ್ಯಾಧ್ಯಕ್ಷೆ ಎಂ.ಪಿ.ಸುಮಾ ವಿಜಯ್ ತಿಳಿಸಿದ್ದಾರೆ. ಗವಿಮಠದ ಡಾ.ಹಿರಿಶಾಂತವೀರ ಸ್ವಾಮೀಜಿ, ಹಿರೇಮಲ್ಲನಕೇರಿ ಮಠದ ಅಭಿನವ ಚನ್ನಬಸವ ಸ್ವಾಮೀಜಿ ಸಾನ್ನಿಧ್ಯವಹಿಸುವರು. ಎಂ.ಪಿ.ರುದ್ರಾಂಬ ಪ್ರಕಾಶ್, ಸಾಹಿತಿ ಕುಂ ವೀರಭದ್ರಪ್ಪ, ಚನ್ನಗಿರಿ ಮಾಜಿ ಶಾಸಕರಾದ ಮಹಿಮಾ ಜೆ.ಪಟೇಲ್, ರಂಗಕರ್ಮಿ ಬಾ.ಮಾ.ಬಸವರಾಜಯ್ಯ, ಸೊಪ್ಪಿನ ಬಾಳಪ್ಪ ಭಾಗವಹಿಸಲಿದ್ದಾರೆ. ಹರಪನಹಳ್ಳಿ ಮಹೇಶರಿಂದ ಗೀತ ನಮನ, ಎಂ.ಪಿ. ಪ್ರಕಾಶ್ ಕಲಾನಿಕೇತನ ವಿದ್ಯಾರ್ಥಿಗಳಿಂದ ನೃತ್ಯ ನಮನ ನಡೆಯಲಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net