ಫೆ.1ರಿಂದ ಬಳ್ಳಾರಿಯಲ್ಲಿ ಅಂತಾರಾಷ್ಟ್ರೀಯ ಕರಾಟೆ ಸ್ಪರ್ಧೆ, ಬಂಡ್ರಾಳ್ ಮೃತ್ಯುಂಜಯ ಸ್ವಾಮಿ ಮಾಹಿತಿ

Karate
Published on

ಬಳ್ಳಾರಿ: ನಗರದ ಅಲ್ಲಂ ಭವನದಲ್ಲಿ ಫೆ.1ಮತ್ತು 2ರಂದು ಗೊಜುರಿಯೊ ಕರಾಟೆ ಡು ಕೆನಿರೊಖಾನ್ ಇಂಡಿಯಾ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಕರಾಟೆ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಶ್ರೀ ಪಂಚಾಕ್ಷರಿ ಮಾರ್ಷಿಯಲ್ ಆರ್ಟ್ಸ್ ಟ್ರಸ್ಟ್ ಅಧ್ಯಕ್ಷ ಬಂಡ್ರಾಳ್ ಮೃತ್ಯುಂಜಯ ಸ್ವಾಮಿ ಹೇಳಿದರು.

ಸ್ಪರ್ಧೆಯಲ್ಲಿ ನೇಪಾಳ, ಶ್ರೀಲಂಕಾ, ಮಲೇಷಿಯಾ ಮತ್ತು ಇಂಡೋನೇಷಿಯಾದ ಒಂದು ಸಾವಿರ ಸ್ಪರ್ಧಿಗಳು ಪಾಲ್ಗೊಳ್ಳಲಿದ್ದಾರೆ. ವಯಸ್ಸು ಆಧರಿಸಿ ಕಟಾ ವಿಭಾಗದಲ್ಲಿ ಮತ್ತು ತೂಕ ಆಧರಿಸಿ ಫೈಟಿಂಗ್ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ಮಲೇಷಿಯಾದ ಕರಾಟೆ ಗ್ರಾೃಂಡ್ ಮಾಸ್ಟರ್ ಕೋಶಿ ಅನಂತನ್, ಬೆಂಗಳೂರಿನ ಡಾನಮಿಕ್, ಶ್ರೀಲಂಕಾದ ಶಿವರಾಜನ್, ನೇಪಾಳದ ಕುಂತಿ, ಹುಬ್ಬಳ್ಳಿಯ ಅನ್ನಪ್ಪ ಮಾರ್ಕಲ್ ಮತ್ತು ಗದಗದ ಪರಶುರಾಮ್ ಹಬೀಬ್ ತೀರ್ಪುಗಾರರಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬ್ಲಾಕ್ ಬೆಲ್ಟ್ ಕುಮತಿ ವಿಭಾಗದಲ್ಲಿ ವಿಜೇತರಾದ ಪುರುಷ ಮತ್ತು ಮಹಿಳಾ ಸ್ಪರ್ಧಿಗಳಿಗೆ ತಲಾ 11ಸಾವಿರ ನಗದು ಬಹುಮಾನ ನೀಡಲಾಗುವುದು. ಕಟಾ ವಿಭಾಗದಲ್ಲಿ ಕರಾಟೆ ಪ್ರದರ್ಶನ ಮಾತ್ರ ನಡೆಯಲಿದ್ದು ಎಲ್ಲರಿಗೂ ಪ್ರಮಾಣ ಪತ್ರ ನೀಡಲಾಗುವುದು. ಸ್ಪರ್ಧೆಯನ್ನು ಸಚಿವ ಕೆ.ಎಸ್.ಈಶ್ವರಪ್ಪ ಉದ್ಘಾಟಿಸುವರು. ಶಾಸಕ ಜಿ.ಸೋಮಶೇಖರ ರೆಡ್ಡಿ ಅಧ್ಯಕ್ಷತೆ ವಹಿಸುವರು. ಧ್ಯಾನ ಕುರಿತ ಪುಸ್ತಕವನ್ನು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಬಿಡುಗಡೆ ಮಾಡಲಿದ್ದಾರೆ ಎಂದರು. ಸ್ವಾಗತ ಸಮಿತಿಯ ಎಸ್.ಮಲ್ಲನಗೌಡ, ಗುರುಮೂರ್ತಿ, ರವಿಚಂದ್ರನ, ವೀರಶೇಖರರೆಡ್ಡಿ, ಗೌರಿಶಂಕರ್, ಕಪ್ಪಗಲ್ಲು ಚಂದ್ರಶೇಖರ ಆಚಾರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net