ಫೆ. 19 ರಂದು ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯೊತ್ಸ

17GDG01
Published on

ಫೆ. 19 ರಂದು ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯೊತ್ಸವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಉತ್ಸವ ಸಮಿತಿ ಉಪದ್ಯಾಕ್ಷ ಅನಿಲ್ ಅಬ್ಬಿಗೇರಿ ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಳೆದ 10 ವರ್ಷಗಳಿಂದ ಜಯಂತ್ಯೋತ್ಸವ ಆಚರಿಸುತ್ತಿದ್ದಾರೆ. ಗದಗ ಬೆಟಗೇರಿ ನಗರದಲ್ಲಿ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಈ ಬಾರಿ ವಿಶೇಷವಾಗಿ ಗ್ರಾಮೀಣ ಭಾಗದ ಜನರಿಂದ ರಂಗೋಲಿ ಸ್ಪರ್ಧೆ, ಆಟೋ ಸಂಘದಿಂದ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ. ಎಲ್ಲ ಹಿಂದೂ ಸಂಘಟನೆಗಳು ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಬೆಳಗ್ಗೆ 11 ಘಂಟೆಗೆ ನಗರದ ರಾಚೋಟೇಶ್ವರ ದೇವಸ್ಥಾನದಲ್ಲಿ ಮೆರವಣಿಗೆ ಚಾಲನೆ ಸಿಗಲಿದೆ. ನಗರದಾದ್ಯಂತ ಮೆರವಣಿಗೆ ನಡೆದು ನಗರದ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಮೆರವಣಿಗೆ ಮುಕ್ತಾಯಗೊಳ್ಳುವುದು. ನಂತರ ಮೈದಾನದಲ್ಲಿ ಬೃಹತ್ ಧರ್ಮಸಭೆ ನಡೆಯಲಿದೆ ಎಂದು ತಿಳಿಸಿದರು.

ರಾಜು ಖಾನಪ್ಪನ್ಮವರ ಮಾತನಾಡಿ, ಶ್ರೀರಾಮ ಮಂದಿರ ಉದ್ಘಾಟನೆ ನಂತರ ಜಿಲ್ಲಾಡಳಿತ ರಾಮ ಮೆರವಣಿಗೆಗೆ ನಿರ್ಬಂಧ ಹೇರಿತ್ತು. ಪ್ರಸ್ತುತ ಶಿವಾಜಿ ಜಯಂತ್ಯೋತ್ಸ ಮೆರವಣಿಗೆ ಯಲ್ಲಿ ಶ್ರೀರಾಮ ಮೂರ್ತಿ ಮೆರವಣಿಗೆ ಮಾಡಲಾಗುವುದು. ಶ್ರೀರಾಮ ಸೇನೆ ವತಿಯಿಂದ ಒಂದು ಎಕೆರೆ ಜಾಗ ಖರೀದಿಸಲಾಗಿದೆ. ಇಲ್ಲಿ ಗೋಶಾಲೆ, ಚಿಕ್ಕದಾದ ರಾಮಮಂದಿರ, ಬಡಮಕ್ಕಳಿಗೆ ವಸತಿ ವ್ಯವಸ್ಥೆ ಮಾಲಾಗುವುದು. ಈ ಭೂಮಿಯನ್ನು ಛತ್ರಪತಿ ಶಿವಾಜಿ ಜಯಂತ್ಯೋತ್ಸವ ಸಮಿತಿಯಿಂದ ಉದ್ಘಾಟಿಸಲಾಗುವುದು ಎಂದರು.

ಫೆ. 19 ರಂದು ನಡೆಯುವ ಮೆರವಣಿಗೆಯಲ್ಲಿ 20 ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಟಾಂಗಾ ಕೂಟ್ ಸರ್ಕಲ್ ಮತ್ತು ಮೈದಾನದಲ್ಲಿ ಈ ಊಟದ ವ್ಯವಸ್ಥೆ ನಡೆಯುವುದು. 

ಕಳೆದ ಸಾಲಿನಿಂದ ಶಿವಪ್ರಭು ದೌಡ್ ಕಾರ್ಯಕ್ರಮ ಆರಂಭಿಸಲಾಗಿದೆ. ಶಿರಹಟ್ಟಿ ಹೊಳಲಮ್ಮ ದೇವಸ್ಥಾನದಿಂದ ರಾಚೋಟೇಶ್ವರ ದೇವಸ್ಥಾನ ವರೆಗೂ ಫೆ.19 ರಂದು ಜ್ಯೋತಿ ಆಗಮಿಸುವುದು. ದಾರಿಯಲ್ಲಿ ಬರುವ ಗ್ರಾಮದೇವತೆಗಳಿಗೆ ಪೂಜೆ ಸಲ್ಲಿಸುತ್ತ ಜ್ಯೋತಿ ಆಗಮಿಸುವುದು. ಮೆರವಣಿಗೆ ಆರಂಭಕ್ಕೂ ಮುನ್ನ ರಾಚೋಟೇಶ್ವರ ದೇವಸ್ಥಾನಕ್ಕೆ ಬಂದು ಜ್ಯೋತಿ ಬೆಳಗಿಸಿದ ನಂತರ ಮೆರವಣಿಗೆ ಆರಂಭವಾಗುವುದು ಎಂದು ರಾಜು ಖಾನಪ್ಪನ್ನವರ ಹೇಳಿದರು.

ಸಮಿತಿಯ ಅಧ್ಯಕ್ಷ ಜಗದೀಶ ಪೂಜಾರ ಮಾತನಾಡಿದರು. ಸುನೀಲ ಕಬಾಡೆ, ಅಜ್ಜನ್ನ ಮಲ್ಲಾಡದ, ರಾಜನ್ನ ಮಲ್ಲಾಡದ, ಸಹದೇವ ಗಣಾಚಾರಿ, ಕಿಶನ್ ಮೆರವಾಡೆ, ಶಿವಯೋಗಿ ಹಿರೇಮಠ, ಮಹೇಶ ರೋಖಡೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net