ಫೆ. 16ಕ್ಕೆ ಶ್ರೀ ರಂಗನಾಥಸ್ವಾಮಿ ಬ್ರಹ್ಮರಥೋತ್ಸವ

10-ANP-P1 RANGANATHA GOD
Published on

ಆನಂದಪುರ: ಇಲ್ಲಿನ ಗ್ರಾಮ ದೇವರಾದ ಶ್ರೀ ಲಕ್ಷಿ÷್ಮÃ ರಂಗನಾಥ ಸ್ವಾಮಿ ದೇವಾಲಯದಲ್ಲಿ ಫೆ.16ರಂದು ಮಹಾ ಬ್ರಹ್ಮ ರಥೋತ್ಸವ ಹಮ್ಮಿಕೊಳ್ಳಲಾಗಿದೆ. ಪ್ರತಿ ವರ್ಷ ರಥಸಪ್ತಮಿ ದಿನದಂದು ಬ್ರಹ್ಮರಥೋತ್ಸವ ನಡೆಸಲಾಗುತ್ತದೆ. ರಥೋತ್ಸವದ ಅಂಗವಾಗಿ ಫೆ.14ರಿಂದ 18ರವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಫೆ.14ರಂದು ಬೆಳಗ್ಗೆ 9ಗಂಟೆಗೆ ಅಭಿಷೇಕ, ಅಲಂಕಾರ ಮತ್ತು ತೀರ್ಥ ಪ್ರಸಾದ ವಿತರಣೆ, ಸಂಜೆ 7 ಗಂಟೆಗೆ ಅಂಕುರಾರ್ಪಣೆ, ರಕ್ಷಾಬಂಧನ, ಅಽವಾಸ ಹೋಮ, ಶೇಷವಾಹನೋತ್ಸವ, ಭಜನಾ ಸೇವೆ ನಡೆಯಲಿದೆ. 15ರಂದು ಬೆಳಗ್ಗೆ ೮ಗಂಟೆಗೆ ಯಾಗಶಾಲಾ ಪ್ರವೇಶ, ಧ್ವಜ ಪಟ ಪೂಜೆ, ಗರುಡೋತ್ಸವ, ಮಹಾ ಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿತರಣೆ, ಸಂಜೆ 5ಗಂಟೆಗೆ ಹಂಸವಾಹನೋತ್ಸವ, 6.30ಕ್ಕೆ ಕಲ್ಯಾಣೋತ್ಸವ ಮತ್ತು ರಾತ್ರಿ 9ಗಂಟೆಗೆ ಮಹಾಮಂಗಳಾರತಿ, ತೀರ್ಥಪ್ರಸಾದ ವಿತರಣೆ ನಡೆಯಲಿದೆ. ಫೆ.16 ರಂದು ಬೆ.9 ಕ್ಕೆ ಗಜವಾಹನೋತ್ಸವ, 11.30ಕ್ಕೆ ಯಾತ್ರಾದಾನ ಪೂರ್ವಕ ಮಹಾ ಬ್ರಹ್ಮ ರಥೋತ್ಸವ, ರಾಜ ಬೀದಿಯಲ್ಲಿ ರಥದ ಮೆರವಣಿಗೆ ನಡೆಯಲಿದೆ. ಮಧ್ಯಾಹ್ನ 12.30ರಿಂದ ಅನ್ನ ಸಂತರ್ಪಣೆ, ಸಂಜೆ 7ಗಂಟೆಗೆ ಡೋಲೋತ್ಸವ, ಭಜನಾ ಸೇವೆ, ಭರತ ನಾಟ್ಯ ಪ್ರದರ್ಶನ ನಡೆಯಲಿದೆ. 17ರಂದು ಬೆಳಗ್ಗೆ 10ಗಂಟೆಗೆ ಅಶ್ವವಾಹನೋತ್ಸವ, ಅವಭರತ ಚಕ್ರಸ್ನಾನ, ತೀರ್ಥ ಪ್ರಸಾದ ವಿತರಣೆ ನಡೆಯಲಿದೆ. ಸಂಜೆ 6ಗಂಟೆಗೆ ಭಜನಾ ಸೇವೆ, ಭರತ ನಾಟ್ಯ ಸೇವೆ, ರಾತ್ರಿ 8 ಗಂಟೆಗೆ ಯಾಗಶಾಲೆಯಲ್ಲಿ ಪೂರ್ಣಾಹುತಿ ಮತ್ತು ಮಹಾಪೂಜೆ ನಡೆಯಲಿದೆ. 18 ರಂದು ಬೆಳಗ್ಗೆ 9ಗಂಟೆಗೆ ಮಹಾ ಅಭಿಷೇಕ, ತೀರ್ಥ ಪ್ರಸಾದ ವಿನಿಯೋಗ, ಸಂಜೆ 6.30ಕ್ಕೆ ಶಯನೋತ್ಸವ, 7ಗಂಟೆಗೆ ಭಜನಾ ಸೇವೆ ನಡೆಯಲಿದೆ. ರಾತ್ರಿ 8.30ಕ್ಕೆ ಮಹಾಪೂಜೆ ಮತ್ತು ಪ್ರಸಾದ ವಿನಿಯೋಗ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net