ಕೊಳೆತ ಸ್ಥಿತಿಯಲ್ಲಿ ನವಜಾತ ಶಿಶುವಿನ ಕಳೇಬರ ಪತ್ತೆ

broona
Published on

ಕಿನ್ನಿಗೋಳಿ: ಕೆಂಚನಕೆರೆ ತಿರುವಿನಲ್ಲಿ ತ್ಯಾಜ್ಯ ವಿಲೇವಾರಿ ವೇಳೆ ಪ್ಲಾಸ್ಟಿಕ್ ಚೀಲದಲ್ಲಿ ಕೊಳೆತ ಸ್ಥಿತಿಯಲ್ಲಿ ಮಗುವಿನ ಭ್ರೂಣ ದೊರೆತಿದೆ. ಮೂಲ್ಕಿ, ಕಿನ್ನಿಗೋಳಿ ರಾಜ್ಯ ಹೆದ್ದಾರಿಯ ಕೆಂಚನಕೆರೆ ತಿರುವಿನಲ್ಲಿ ಕಸ ತ್ಯಾಜ್ಯ ಬಿದ್ದು ದುರ್ನಾತ ಬೀರುತ್ತಿತ್ತು.

ಇದನ್ನು ಮನಗಂಡು ಕಿಲ್ಪಾಡಿ ಗ್ರಾಪಂ ಭಾನುವಾರ ಕಸ ವಿಲೇವಾರಿ ಮಾಡುವ ಸಂದರ್ಭ ಕಾರ್ಮಿಕರಿಗೆ ಪ್ಲಾಸ್ಟಿಕ್ ಚೀಲದಲ್ಲಿ ಕೊಳೆತ ಸ್ಥಿತಿಯಲ್ಲಿ ಭ್ರೂಣ ಪತ್ತೆಯಾಗಿದೆ.

ಪ್ಲಾಸ್ಟಿಕ್ ಚೀಲದಲ್ಲಿ ಎರಡು ಕೈಗವಸು ಹಾಗೂ ಪ್ಯಾಡ್, ಕೊಳೆತ ರೀತಿಯಲ್ಲಿ ಭ್ರೂಣ ಇದ್ದುದ್ದು ಕಂಡು ಬಂದಿದೆ. ಅದರ ಪಕ್ಕದಲ್ಲಿ ಇನ್ನೊಂದು ಚೀಲದಲ್ಲಿ ಪ್ಯಾಡ್ ನೈಟಿ, ವಸ್ತ್ರ ಬಟ್ಟೆ ಕಂಡು ಬಂದಿದೆ,  ಕಳೆದ ವಾರ ಮಳೆ ಬಂದಿರುವುದರಿಂದ ಪ್ಲಾಸ್ಟಿಕ್ ಚೀಲದಲ್ಲಿ ನೀರು ತುಂಬಿ ಕಳೇಬರವು ಕೊಳೆತು ಹೋಗಿರಬಹುದು ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಮೂಲ್ಕಿ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net