ಕೆರೆ ಏರಿ ಕುಸಿಯುವ ಆತಂಕ

1ark-8,
Published on


ಅರಕಲಗೂಡು: ತಾಲೂಕಿನ ಕೊಣನೂರಿನಲ್ಲಿ ಕೆರೆಕೋಡಿ ಮಾರ್ಗದ ದೊಡ್ಡಕೆರೆ ಏರಿ ಕುಸಿಯುತ್ತಿರುವ ಸ್ಥಳಕ್ಕೆ ಗುರುವಾರ ಕಾಂಗ್ರೆಸ್ ಮುಖಂಡ ಎಚ್.ಪಿ.ಶ್ರೀಧರ್‌ಗೌಡ ಭೇಟಿ ನೀಡಿ ಪರಿಶೀಲಿಸಿದರು. ಈಗ ಸುರಿಯುತ್ತಿರುವ ಮಳೆಗೆ ಕೆರೆ ಏರಿ ಮೇಲೆ ಬಿರುಕು ಕಾಣಿಸಿಕೊಂಡು ಆತಂಕ ಮೂಡಿಸಿದೆ. ಕೆರೆ ಏರಿ ಒಡೆದರೆ ಅಪಾರ ಪ್ರಮಾಣದಲ್ಲಿ ತುಂಬಿರುವ ನೀರು ತೋಟದ ಬೆಳೆ ಜಮೀನಿಗೆ ನುಗ್ಗಿ ದೊಡ್ಡ ಅನಾಹುತ ಸಂಭವಿಸಲಿದೆ. ಕೆರೆ ಏರಿ ಮೇಲೆ ಸಾರ್ವಜನಿಕರು ಓಡಾಡುತ್ತಿದ್ದು ಜೀವ ಭಯ ಕಾಡುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಕೆರೆ ಏರಿ ದುರಸ್ತಿ ಪಡಿಸಿ ಮುಂದಾಗುವ ಅಪಾಯ ತಪ್ಪಿಸಬೇಕು ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net