ಅಪಾಯ ಆಹ್ವಾನಿಸುತ್ತಿದೆ ಪರಿವರ್ತಕ: ಪಾದಚಾರಿಗಳಿಗೆ ವಿದ್ಯುತ್ ಅವಘಡಗಳ ಭೀತಿ

vidyuth
ನೆಲ್ಯಾಡಿಯ ಯೂನಿಯನ್ ಬ್ಯಾಂಕ್ ಮುಂಭಾಗದ ಪಾದಚಾರಿ ಮಾರ್ಗದಲ್ಲಿರುವ ವಿದ್ಯುತ್ ಪರಿವರ್ತಕ.
Published on

ವಿಜಯವಾಣಿ ಸುದ್ದಿಜಾಲ ನೆಲ್ಯಾಡಿ

ರಾ.ಹೆ 75ರ ನೆಲ್ಯಾಡಿ ಪೇಟೆ ಭಾಗದಲ್ಲಿರುವ ಗುರುಕೃಪಾ ಹೋಟೆಲ್ ಸಮೀಪ ಹಾಗೂ ಯೂನಿಯನ್ ಬ್ಯಾಂಕ್ ಮುಂಭಾಗ ಪಾದಚಾರಿ ರಸ್ತೆಯಲ್ಲಿ ಇರುವ ವಿದ್ಯುತ್ ಪರಿವರ್ತಕವೊಂದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಪಾದಚಾರಿಗಳು ಇದೇ ವಿದ್ಯುತ್ ಪರಿವರ್ತಕದ ಅಡಿಯಿಂದ ನಡೆದುಕೊಂಡು ಹೋಗಬೇಕಿದ್ದು, ಯಾವುದೇ ಸಂದರ್ಭ ವಿದ್ಯುತ್ ಅವಘಡಗಳು ಎದುರಾಗುವ ಸಾಧ್ಯತೆ ಇದೆ.

ಈಗಾಗಲೇ ನೆಲ್ಯಾಡಿ ಸಹಿತ ಅಪಾಯಕಾರಿ ಸ್ಥಿತಿಯಲ್ಲಿರುವ ಹಲವು ವಿದ್ಯುತ್ ಪರಿವರ್ತಕದಿಂದ ಅವಘಡಗಳು ನಡೆದಿವೆ. ಆದರೆ ಸಂಬಂಧಿತ ಇಲಾಖೆ ಪ್ರತಿಕ್ರಿಯೆ ನೀಡುವಲ್ಲಿ ವಿಫಲವಾಗಿದೆ. ಜತೆಗೆ ಹೆದ್ದಾರಿ ಕಾಮಗಾರಿಯಿಂದಾಗಿ ಕೆಲವೆಡೆ ತೆರೆದ ಚರಂಡಿಗಳಿದ್ದು, ಪಾದಚಾರಿಗಳಿಗೆ ಮೃತ್ಯುಕೂಪಗಳೇ ಆಗಿವೆ.

ಊರವರು ಒಟ್ಟುಗೂಡಿ ಅನೇಕ ಬಾರಿ ಸಂಬಂಧಿತ ಅಧಿಕಾರಿಗಳ ಬಳಿ ಸಮಸ್ಯೆಗಳ ಕುರಿತು ಅಲವತ್ತುಕೊಂಡಿದ್ದರೂ ಅಧಿಕಾರಿಗಳು ಮಾತ್ರ ಇದಕ್ಕೂ ಸಮಸ್ಯೆಗೂ ಸಂಬಂಧವಿಲ್ಲದಂತೆ ಇದ್ದಾರೆ. ಸಾರ್ವಜನಿಕರು ಈ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಹೋರಾಟ ನಡೆಸುವ ಕುರಿತು ಎಚ್ಚರಿಕೆ ನೀಡಿದ್ದಾರೆ.

ನೆಲ್ಯಾಡಿಯಲ್ಲಿ ಹೆದ್ದಾರಿ ಕಾಮಗಾರಿ ನಡೆಯುವ ಸಂದರ್ಭ ಹೆದ್ದಾರಿ ಪ್ರಾಧಿಕಾರಕ್ಕೆ ಎಚ್.ಟಿ. ಮಾರ್ಗ ಶಿಫ್ಟ್ ಮಾಡುವ ಅನಿವಾರ್ಯತೆ ಇತ್ತು. ಈ ಸಂದರ್ಭ ಹೆದ್ದಾರಿ ಪ್ರಾದಿಕಾರ ಸೂಚಿಸಿದ ಸ್ಥಳದಲ್ಲಿಯೇ ಹೊಸ ಪರಿವರ್ತಕ ಅಳವಡಿಸಿದ್ದೇವೆ. ಆದರೆ ಅದೇ ಜಾಗದಲ್ಲಿ ಹೆದ್ದಾರಿ ಪ್ರಾಧಿಕಾರದವರು ಪಾದಚಾರಿ ಮಾರ್ಗ ನಿರ್ಮಿಸಿರುವ ಬಗ್ಗೆ ನಮಗೆ ಮಾಹಿತಿ ನೀಡಲಿಲ್ಲ.ಪರಿವರ್ತಕ ಇರುವ ಸ್ಥಳದಲ್ಲಿ ಫೆನ್ಸಿಂಗ್ ಹಾಕುವಂತೆ ಹೆದ್ದಾರಿ ಇಲಾಖೆಗೆ ಸೂಚಿಸಲಾಗುವುದು. ರಮೇಶ್ ಬಿ., ಕಿರಿಯ ಸಹಾಯಕ ಅಭಿಯಂತ. ಮೆಸ್ಕಾಂ, ನೆಲ್ಯಾಡಿ https://www.vijayavani.net/nh75-four-lane-work-problem https://www.vijayavani.net/mp-brijesh-chauta-visits-madaninagar

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net