ಭಯ ಪಡದೆ ದೂರು ನೀಡಿ: ಎಸ್ಪಿ ಬಿ.ಎಲ್.ಶ್ರೀಹರಿಬಾಬು ಸಲಹೆ

kudligi
ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ದಲಿತರ ಕೊಂದು-ಕೊರತೆ ಸಭೆಯಲ್ಲಿ ಎಸ್ಪಿ ಬಿ.ಎಲ್.ಹರಿಬಾಬು, ಡಿವೈಎಸ್ಪಿ ಮಲ್ಲೇಶಪ್ಪ ಮಲ್ಲಾಪುರ, ಸಿಪಿಐ ವೆಂಕಟಸ್ವಾಮಿ ಇದ್ದರು.
Published on

ಕೂಡ್ಲಿಗಿ: ನಿಖರ ಮಾಹಿತಿಯೊಂದಿಗೆ ದೂರು ಸಲ್ಲಿಸಿದಾಗ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಾಧ್ಯ ಎಂದು ಎಸ್ಪಿ ಬಿ.ಎಲ್.ಶ್ರೀಹರಿಬಾಬು ಹೇಳಿದರು.

ಕಿರುಕುಳ ನೀಡಿದವರ ಹೆಸರನ್ನು ಪ್ರಸ್ತಾಪಿಸಿ

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ದಲಿತರ ಕುಂದು-ಕೊರತೆ ಸಭೆಯಲ್ಲಿ ಮಾತನಾಡಿದರು.
ಅಂತೆ-ಕಂತೆಗಳಿಂದ ಸಮಸ್ಯೆ ಪರಿಹಾರವಾಗಲ್ಲ. ಬದಲಿಗೆ ಜಟಿಲವಾಗುತ್ತದೆ. ಕಿರುಕುಳ ನೀಡಿದವರ ಹೆಸರನ್ನು ಪ್ರಸ್ತಾಪಿಸಿದರೆ ಕ್ರಮ ಕೈಗೊಳ್ಳಬಹುದು. ಬಹಿರಂಗ ಸಭೆಯಲ್ಲಿ ಹೇಳಲು ಹಿಂಜರಿಕೆಯಾದರೆ ಖುದ್ದಾಗಿ ಮಾಹಿತಿ ನೀಡಬಹುದು. ಅವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಎಂದರು.

ದಲಿತರು ಎಂಬ ಕಾರಣಕ್ಕೆ ಮನೆಗಳು ಖಾಲಿಯಿದ್ದರೂ ಬಾಡಿಗೆ ನೀಡುತ್ತಿಲ್ಲ

ಕೊಟ್ಟೂರಿನ ದಲಿತ ಮುಖಂಡ ಎರ‌್ರಿಸ್ವಾಮಿ ಮಾತನಾಡಿ, ದಲಿತರು ಎಂಬ ಕಾರಣಕ್ಕೆ ಮನೆಗಳು ಖಾಲಿಯಿದ್ದರೂ ಬಾಡಿಗೆ ನೀಡುತ್ತಿಲ್ಲ. ಅಲ್ಲದೆ, ನಿವೇಶನಗಳನ್ನು ನೀಡಲು ಹಿಂದೇಟು ಹಾಕುತ್ತಿದ್ದಾರೆ. ಶತಮಾನಗಳಿಂದಲೂ ಸಾಮಾಜಿಕ ಅಸ್ಪಶ್ಯತೆಯಿಂದ ಬಳಲುತ್ತಿದ್ದೇವೆ. ದಯವಿಟ್ಟು ಬದುಕಲು ಆವಕಾಶ ಕಲ್ಪಿಸಿ ಎಂದು ಮನವಿ ಮಾಡಿದರು.

ಮದ್ಯಪಾನ ಯುವ ಸಮುದಾಯದ ಭವಿಷ್ಯಕ್ಕೆ ಮಾರಕ

ಪಪಂ ಸದಸ್ಯರಾದ ಕಾವಲ್ಲಿ ಶಿವಪ್ಪ ನಾಯಕ, ಬಾಸೂ ನಾಯ್ಕ, ಜಯರಾಮ್ ನಾಯಕ ಮಾತನಾಡಿ, ಡಾ.ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಸಂಡೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಹೆಚ್ಚಾಗುತ್ತದೆ. ಮಕ್ಕಳನ್ನು ಶಾಲೆಗೆ ಬಿಟ್ಟು ಬರಲು ಸಾಧ್ಯವಾಗುತ್ತಿಲ್ಲ.ಗ್ರಾಮೀಣ ಭಾಗದಲ್ಲಿ ಬಹುತೇಕ ಬೀಡಿ ಅಂಗಡಿಗಳಲ್ಲೂ ಮದ್ಯ ಮಾರಾಟ ಮಾಡಲಾಗುತ್ತಿದೆ. ಯುವ ಸಮುದಾಯದ ಭವಿಷ್ಯಕ್ಕೆ ಮಾರಕವಾಗುತ್ತಿದೆ. ಇದನ್ನು ಕೂಡಲೇ ನಿಯಂತ್ರಿಸಬೇಕು ಎಂದು ಒತ್ತಾಯಿಸಿದರು.


ತಾಲೂಕಿನ ಹಲವು ಗ್ರಾಮಗಳಲ್ಲಿ ದಲಿತರ ಬದುಕು ಹೀನಾಯ ಸ್ಥಿತಿಯಲ್ಲಿದೆ. ಗ್ರಾಮಗಳ ಹೊಟೇಲ್‌ಗಳಲ್ಲಿ ಕುಡಿವ ನೀರು, ಉಪಾಹಾರ ನೀಡಲು ನಿರಾಕರಣೆಯಂತಹ ಅಸ್ಪಶ್ಯತೆ ಇನ್ನೂ ಜೀವಂತವಾಗಿದೆ ಎಂದು ದಲಿತ ಮುಖಂಡರು ಸಭೆ ಗಮನಕ್ಕೆ ತಂದರು.ಡಿವೈಎಸ್ಪಿ ಮಲ್ಲೇಶಪ್ಪ ಮಲ್ಲಾಪುರ, ಕೊಟ್ಟೂರು ಸಿಪಿಐ ವೆಂಕಟಸ್ವಾಮಿ, ಹಗರಿಬೊಮ್ಮನಹಳ್ಳಿ ಸಿಪಿಐ ಟಿ.ಮಂಜಣ್ಣ, ಪಿಎಸ್‌ಐ ಧನಂಜಯ, ನಿವೃತ್ತ ಯೋಧ ಎಚ್.ರಮೇಶ್, ಸಾಲುಮನಿ ರಾಘವೇಂದ್ರ ಸೇರಿ ಮರಿಯಮ್ಮನಹಳ್ಳಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರಿನ ಹಲವು ದಲಿತ ಮುಖಂಡರು ಭಾಗವಹಿಸಿದ್ದರು.
29ಕೂಡ್ಲಿಗಿ1
ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ದಲಿತರ ಕೊಂದು-ಕೊರತೆ ಸಭೆಯಲ್ಲಿ ಎಸ್ಪಿ ಬಿ.ಎಲ್.ಹರಿಬಾಬು, ಡಿವೈಎಸ್ಪಿ ಮಲ್ಲೇಶಪ್ಪ ಮಲ್ಲಾಪುರ, ಸಿಪಿಐ ವೆಂಕಟಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net