

ಮೈಸೂರು: ಟೀಂ ಮೈಸೂರು ತಂಡದಿಂದ ದೇಶದ ಪ್ರಥಮ ದಂಡ ನಾಯಕ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ 125ನೇ ಜಯಂತಿ, ಸ್ವಾತಂತ್ರ್ಯ ಹೋರಾಟಗಾರ ಲಾಲಾ ಲಜಪತ್‌ರಾಯ್ ಅವರ 160ನೇ ಜಯಂತಿ ಆಚರಿಸಲಾಯಿತು.
ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತ (ಮೆಟ್ರೋಪೋಲ್)ದಲ್ಲಿ ಭಾನುವಾರ ಕಾರ್ಯಪ್ಪ ಮತ್ತು ಲಾಲಾ ಲಜಪತ್‌ರಾಯ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಜೈ ಘೋಷ ಕೂಗಲಾಯಿತು.
ತಂಡದ ಮುಖಂಡರಾದ ಗೋಕುಲ್ ಗೋವರ್ಧನ್, ಕಿರಣ್ ಜೈರಾಮೇಗೌಡ, ಸೃಜನ್, ಹಿರಿಯಣ್ಣ, ರಮೇಶ್, ಮುರಳಿ, ಗುರುಮೂರ್ತಿ ಪಂಡಿತ್, ಕೃಷ್ಣ, ನವೀನ್, ಗಣೇಶ್, ಅಮರ್, ಚಂದ್ರಶೇಖರ್, ಪ್ರವೀಣ್, ಸೃಜನ್, ಆನಂದ್, ವಕೀಲರಾದ ನವೀನ್, ಹೇಮಂತ್, ಶಾಂತಕುಮಾರಿ ಇತರರು ಇದ್ದರು.