ಡಿಸಿ ಕೋರ್ಟ್ ಆದೇಶ ವಿಳಂಬ ಮಾಡಲು 10 ಸಾವಿರ ರೂ ಲಂಚ: ಲೋಕಾಯುಕ್ತ ಬಲೆಗೆ ಬಿದ್ದ ಪ್ರಥಮ ದರ್ಜೆ ಸಹಾಯಕ

karnataka-lokayukta.jpg
Published on

ಮಂಡ್ಯ: ಜಿಲ್ಲಾಧಿಕಾರಿ ನ್ಯಾಯಾಲಯದ ಆದೇಶವನ್ನು ವಿಳಂಬ ಮಾಡಲು 10 ಸಾವಿರ ರೂ ಲಂಚ ಸ್ವೀಕಾರ ಮಾಡುತ್ತಿದ್ದ ಮದ್ದೂರು ತಾಲೂಕು ಕಚೇರಿಯ ಕೊಪ್ಪ ಹೋಬಳಿಯ ಆರ್.ಟಿ.ಸಿ ತಿದ್ದುಪಡಿ ಶಾಖೆಯ ವಿಷಯ ನಿರ್ವಾಹಕ (ಪ್ರಥಮ ದರ್ಜೆ ಸಹಾಯಕ) ಡಿ.ಜೆ.ಮಂಜುನಾಥ್ ಸ್ವಾಮಿ ಬುಧವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಕೊಪ್ಪ ಹೋಬಳಿಯ ಬಿದರಮೇಳೆಕೊಪ್ಪಲು ಗ್ರಾಮದ ಮೋಹನ್ ಕುಮಾರ್ ಅವರ ಜಮೀನಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕೋರ್ಟ್ ಆದೇಶವನ್ನು ವಿಳಂಬ ಮಾಡುವುದಕ್ಕಾಗಿ ಮಂಜುನಾಥ್ ಸ್ವಾಮಿ, 10 ಸಾವಿರ ರೂ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಮೋಹನ್ ಕುಮಾರ್ಲೋ ಕಾಯುಕ್ತ ಪೊಲೀಸರಿಗೆ ದೂರು ದಾಖಲಿಸಿದ್ದರು.

ಬುಧವಾರ ಮಧ್ಯಾಹ್ನ ಲೋಕಾಯುಕ್ತ ಪೊಲೀಸರು ನೀಡಿದ ಸೂಚನೆಯಂತೆ ವಿಷಯ ನಿರ್ವಾಹಕ ಮಂಜುನಾಥ್‌ ಅವರಿಗೆ ಮೋಹನ್ ಕುಮಾರ್ ಮದ್ದೂರು ತಾಲೂಕು ಕಚೇರಿಯ ಅಂಗಡಿ ಮಳಿಗೆಗಳ ಬಳಿ 10 ಸಾವಿರ ರೂಪಾಯಿ ಲಂಚವನ್ನು ನೀಡುವಾಗ ಲೋಕಾಯುಕ್ತ ಅಧಿಕಾರಿಗಳು  ದಾಳಿ ಮಾಡಿ ಮಂಜುನಾಥ್ ಅವರನ್ನು ಲಂಚದ ಹಣದ ಸಹಿತ ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net