

ಬಾಗಲಕೋಟೆ: ಜೀವನದ ಬಗ್ಗೆ ಕನಸು ಕಟ್ಟಿಕೊಂಡು ಎಫ್ಡಿಎ ಪರೀಕ್ಷೆ ಬರೆದ ಯುವಕನೊಬ್ಬ, ಮನಗೆ ಹೋಗುವಷ್ಟರಲ್ಲೇ ಅಪಘಾತಕ್ಕೀಡಾಗಿದ್ದು, ಸಾವನ್ನಪ್ಪಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.
ಬಾಗಲಕೋಟೆ ಜಿಲ್ಲೆ ತೇರದಾಳ ಪಟ್ಟಣದ ಅಕ್ಷಯ್ಕುಮಾರ್ ಮೃತ ಯುವಕ. ಈತ ತನ್ನ ಸ್ನೇಹಿತನೊಂದಿಗೆ ಬಾಗಲಕೋಟೆಗೆ ಎಫ್ ಡಿಎ ಪರೀಕ್ಷೆ ಬರೆಯಲು ಬಂದಿದ್ದ. ಇಬ್ಬರು ಪರೀಕ್ಷೆ ಬರೆದು ಊರಿಗೆ ವಾಪಾಸಾಗಲು ಹೊರಟಿದ್ದಾರೆ. ಬೈಕ್ನಲ್ಲಿ ಹೋಗುತ್ತಿದ್ದಾಗ, ಮುಧೋಳ ತಾಲೂಕಿನ ಲೋಕಾಪುರ ಬಳಿ ಎತ್ತೊಂದು ಅಡ್ಡ ಬಂದಿದ್ದು, ಅದಕ್ಕೆ ಬೈಕ್ ಗುದ್ದಿದೆ. ಈ ಅಪಘಾತದಿಂದಾಗಿ ಅಕ್ಷಯಕುಮಾರ ಸಾವನ್ನಪ್ಪಿದ್ದಾನೆ. ಬೈಕಿನ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಯುವಕನಿಗೆ ಗಂಭೀರ ಗಾಯವಾಗಿರುವುದಾಗಿ ತಿಳಿಸಲಾಗಿದೆ. ಲೋಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್)