ಫಯಾಜ್‌ನ ರಕ್ತದ ಮಾದರಿ ಸಂಗ್ರಹ

court
Published on

ಹುಬ್ಬಳ್ಳಿ: ನೇಹಾ ಹಿರೇಮಠ ಕೊಲೆ ಆರೋಪಿತ ಫಯಾಜ್‌ನ ರಕ್ತದ ಮಾದರಿಯನ್ನು ಸಿಐಡಿ ಅಧಿಕಾರಿಗಳು, ಶನಿವಾರ ನ್ಯಾಯಾಧೀಶರ ಸಮ್ಮುಖದಲ್ಲಿ ಸಂಗ್ರಹಿಸಿದರು.
ಆರೋಪಿತ ಫಯಾಜ್‌ನ ಹೆಚ್ಚಿನ ತನಿಖೆಗಾಗಿ ಡಿಎನ್‌ಎ ಪರೀಕ್ಷೆಗಾಗಿ ಸಿಐಡಿ ಅಧಿಕಾರಿಗಳು ಇಲ್ಲಿನ ಒಂದನೇ ಹೆಚ್ಚುವರಿ ದಿವಾಣಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇದನ್ನು ನ್ಯಾಯಾಧೀಶರು ಪರಿಗಣಿಸಿದ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳು ಆಪಾದಿತನನ್ನು ನ್ಯಾಯಾಧೀಶರ ಎದುರು ಹಾಜರು ಪಡಿಸಿ, ಅವರ ಸಮ್ಮುಖದಲ್ಲಿ ವೈದ್ಯರು ಫಯಾಜ್‌ನ ರಕ್ತದ ಮಾದರಿ ಸಂಗ್ರಹಿಸಿದರು.
ಕೃತ್ಯ ನಡೆದ ಸ್ಥಳದಲ್ಲಿ ಹಾಗೂ ಆಪಾದಿತ ಕೊಲೆ ಮಾಡಲು ಬಳಸಿದ್ದ ಚಾಕುವಿನ ಮೇಲೆ ಎರಡು ರಕ್ತದ ಗುಂಪುಗಳು ಪತ್ತೆಯಾದ ಹಿನ್ನೆಲೆಯಲ್ಲಿ ತನಿಖಾಧಿಕಾರಿಗಳು ಫಯಾಜ್‌ನ ಡಿಎನ್‌ಎ ಪರೀಕ್ಷೆಗೆ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net