

ಧಾರವಾಡ: ನನ್ನ ಮಗ ಫಯಾಜ್ ಮಾಡಿದ್ದು ತಪ್ಪು. ನಾನು ನೂರಾರು ಮಕ್ಕಳಿಗೆ ಶಿಕ್ಷಣ ಕೊಡುತ್ತೇನೆ. ಮಗನ ತಪ್ಪಿನಿಂದ ನಾನು ತಲೆ ತಗ್ಗಿಸುವಂತಾಗಿದೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು. ಅವನ ತಪ್ಪಿಗೆ ಈ ನೆಲದ ಕಾನೂನಿನ ಅಡಿ ಶಿಕ್ಷೆ ಆಗಲಿ ಎಂದು ಹುಬ್ಬಳ್ಳಿಯ ನೇಹಾ ಹಿರೇಮಠ ಕೊಲೆ ಆರೋಪಿ ಫಯಾಜ್ ತಾಯಿ ಮಮ್ತಾಜ್ ಹೇಳಿದರು.
ನಗರ ಹೊರವಲಯದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೇಹಾ ಕೂಡ ನನ್ನ ಮಗಳು ಇದ್ದ ಹಾಗೆ. ಅವಳ ತಂದೆ ತಾಯಿಗೆ ಆದಷ್ಟು ದುಃಖ ನನಗೂ ಆಗಿದೆ. ನನ್ನ ಮಗ ಮಾಡಿದ ತಪ್ಪಿಗೆ ಕರ್ನಾಟಕದ ಜನತೆ ಮತ್ತು ನೇಹಾಳ ತಂದೆ- ತಾಯಿಗೆ ಕೈ ಮುಗಿದು ಕ್ಷಮೆ ಕೇಳುತ್ತೇನೆ ಎಂದರು.