ಕೊಬ್ಬರಿ ಹೋರಿ ಸ್ಪರ್ಧೆಯಲ್ಲಿ ಹೋರಿ ತಿವಿದು ಓರ್ವ ಸಾವು

Crime Logo
Published on

ಹಾನಗಲ್ಲ: ಕೊಬ್ಬರಿ ಹೋರಿ ಸ್ಪರ್ಧೆಯಲ್ಲಿ ಹೋರಿ ನೋಡುತ್ತ ನಿಂತಿದ್ದ ಯುವಕ ಹೋರಿ ತಿವಿದು ಮೃತಪಟ್ಟ ಘಟನೆ ತಾಲೂಕಿನ ವದಿರ್ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ಮುಂಡಗೋಡ ತಾಲೂಕಿನ ರಾಮಾಪುರದ ಹನುಮೇಶ (ಸಂದೀಪ) ಮಂಜಪ್ಪ ಶೆದಿಯಣ್ಣನವರ ಮೃತ ಯುವಕ.

ಪ್ರಕರಣಕ್ಕೆ ಸಂಬಂಧಿಸಿ ಹೋರಿ ಆಯೋಜನೆ ಮಾಡಿರುವ ಆರೋಪದಡಿ ಸಣ್ಣಿಂಗಪ್ಪ ನಿಸ್ಸೀಮಪ್ಪ ಹಲಸೂರ, ರಾಜು ಹರಿಜನ, ಮಹದೇವಪ್ಪ ತಿರಕಪ್ಪ ಹುಚ್ಚಣ್ಣನವರ, ಸೋಮು ಹಲಸೂರ, ಸುರೇಶ ಹರಿಹನ, ಯಲ್ಲಪ್ಪ ತಂಬೂಳಿ, ಮಂಜು ಹುಲ್ಲಾಳ, ಸಣ್ಣಿಂಗಪ್ಪ, ಬಸವರಾಜ ಬೈಲಪ್ಪ ಚನ್ನಪ್ಪನವರ ಸೇರಿ 9 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

ಇವರು ಯಾವುದೇ ಮುಂಜಾಗ್ರತ ಕ್ರಮ ಕೈಗೊಳ್ಳದೆ ಕೊಬ್ಬರಿ ಹೋರಿ ಸ್ಪರ್ಧೆ ಆಯೋಜಿಸಿದ್ದರಿಂದ ಹೋರಿ ನನ್ನ ಮಗನಿಗೆ ತಿವಿದು ಆತ ಮೃತಪಟ್ಟಿದ್ದಾನೆ ಎಂದು ಮೃತನ ತಂದೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾನೆ. ಈ ಕುರಿತು ಆಡೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net