ಮಲತಾಯಿಯಿಂದಲೇ ಕೊಲೆಗೆ ಸುಪಾರಿ; ಮಾಜಿ ಸಿಎಂ ಧರ್ಮಸಿಂಗ್ ಸಂಬಂಧಿ ಸಿದ್ಧಾರ್ಥ್ ಕೊಲೆ ಪ್ರಕರಣ, ಮಹಿಳೆಯ ಬಂಧನ..

SiddharthaDevenderSingh-murder-case
Published on

ಬೆಂಗಳೂರು: ಕಳೆದೆರಡು ದಿನಗಳಿಂದ ಕುತೂಹಲ ಮೂಡಿಸಿದ್ದ ಮಾಜಿ ಸಿಎಂ ಧರ್ಮಸಿಂಗ್ ಅವರ ಸಂಬಂಧಿ ಸಿದ್ಧಾರ್ಥ್ ಕೊಲೆ ಪ್ರಕರಣಕ್ಕೆ ಈಗ ಮಹತ್ವದ ತಿರುವು ಸಿಕ್ಕಿದ್ದು, ಮಲತಾಯಿಯಿಂದಲೇ ಕೊಲೆಗೆ ಸುಪಾರಿ ನೀಡಲಾಗಿರುವ ವಿಷಯ ಬಹಿರಂಗಗೊಂಡಿದೆ. ಕೊಲೆಗೆ ಸುಪಾರಿ ನೀಡಿರುವ ಮಲತಾಯಿಯನ್ನು ಬೆಂಗಳೂರಿನ ಅಮೃತಹಳ್ಳಿ ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಬುಧವಾರ ಬೆಳಗ್ಗೆಯೇ ಆರೋಪಿಯನ್ನು ಬಂಧಿಸಿರುವ ಪೊಲೀಸರು ಪ್ರಕರಣ ಸಂಬಂಧ ಹೆಚ್ಚಿನ ಮಾಹಿತಿಗಾಗಿ ತೀವ್ರವಾಗಿ ತನಿಖೆಯನ್ನೂ ನಡೆಸಿದ್ದಾರೆ.

ಸಿದ್ಧಾರ್ಥ್ ಅವರ ತಂದೆ ದೇವೇಂದರ್ ಸಿಂಗ್ ಅವರಿಗೆ ಎರಡು ಮದುವೆಯಾಗಿದ್ದು, ಎರಡನೇ ಹೆಂಡತಿ ಸಿದ್ಧಾರ್ಥ್ ಕೊಲೆಗಾಗಿ ಶ್ಯಾಮ್​ ಹಾಗೂ ವಿನೋದ್ ಎಂಬುವವರಿಗೆ ಸುಪಾರಿ ನೀಡಿದ್ದರು. ಸುಪಾರಿ ಮೇರೆಗೆ ಸಿದ್ಧಾರ್ಥ್​ನನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದರು. ಆದರೆ ಕೊಲೆ ಮಾಡಿರುವವರ ಪೈಕಿ ಪ್ರಮುಖ ಆರೋಪಿ ಶ್ಯಾಮ್​ ಈಗಾಗಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆಸ್ತಿ ವಿಚಾರಕ್ಕೆ ಸಂಬಂಧಿಸಿ ಕೊಲೆಗೆ ಸುಪಾರಿ ನೀಡಿದ್ದಾಗಿ ಆರೋಪಿ ಮಹಿಳೆ ಒಪ್ಪಿಕೊಂಡಿದ್ದು, ಪೊಲೀಸರು ಮತ್ತಷ್ಟು ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net