

ಉಳ್ಳಾಗಡ್ಡಿ-ಖಾನಾಪುರ: ತಂದೆ ಸತೀಶ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಕ್ಷೇತ್ರವನ್ನು ಸಮಗ್ರ ಅಭಿವೃದ್ಧಿ ಮಾಡುವುದಾಗಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಭರವಸೆ ನೀಡಿದರು.
ಗ್ರಾಮದ ಗ್ರಾಮೀಣ ಪಂಚಾಯತ್ ರಾಜ್ ಯೋಜನೆಯಡಿ 40 ಲಕ್ಷ ರೂ. ವೆಚ್ಚದ ವಿವಿಧ ಕಾಮಗಾರಿಗೆ ಭಾನುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಗ್ರಾಪಂ ಅಧ್ಯಕ್ಷ ಚಂದ್ರಕಾಂತ ಪಾಟೀಲ, ಹುಕ್ಕೇರಿ ತಹಸೀಲ್ದಾರ್ ಮಂಜುಳಾ ನಾಯಿಕ, ರಾಜು ಅವಟೆ, ಮಹಾವೀರ ಅವಟೆ, ಸುಧೀರ ಗಿರಿಗೌಡರ, ಬಸೀರ್ ಲಾಡಖಾನ್, ಮಹಾಂತೇಶ ಮಗದುಮ್ಮ, ಶಾಂತಿನಾಥ ಪಾಟೀಲ, ಮುರುಗೇಶ ಹಿರೇಮಠ, ಮಹಾರುದ್ರ ಜರಳಿ, ಮಲ್ಲಪ್ಪ ಮಾಳಗಿ, ಗಿರಿಗೌಡ ಪಾಟೀಲ, ತವನಪ್ಪಗೌಡ ಪಾಟೀಲ, ಬಿ.ಟಿ.ಪಾಟೀಲ ಇತರರಿದ್ದರು.