ಹೊಸಪೇಟೆ: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬ ಹೆತ್ತ ತಂದೆಯನ್ನು ಕಟ್ಟಿಗೆಯಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವ ಅಮಾನವೀಯ ಘಟನೆ ಕುದುರೇಡವು ಗ್ರಾಮದಲ್ಲಿ ನಡೆದಿದೆ. ಗ್ರಾಮದ ತಿಪ್ಪೇರುದ್ರ(70) ಮೃತಪಟ್ಟಿದ್ದು, ಆರೋಪಿ ನಾಗರಾಜ(೩೨) ಎಂಬಾತನನ್ನು ಬಂಧಿಸಲಾಗಿದೆ.
ರವಿವಾರ ಸಂಜೆ ಮನೆಗೆ ಬಂದ ಮೊಮ್ಮಗ ನಾಗರಾಜನಿಗೆ ಅಜ್ಜಿ ಮಂಡಕ್ಕ ಊಟಕ್ಕೆ ಕರೆಯುತ್ತಿದ್ದಂತೆ ತಿಪ್ಪೇರುದ್ರ ಮಧ್ಯೆ ಪ್ರವೇಶಿಸಿ 'ನಾಯಿಗಳು ಎಲ್ಲಾದರೂ ಊಟ ಮಾಡಿ ಬಂದಿರುತ್ತವೆ' ಎಂದ ಅವಮಾನಿಸಿದ್ದರಿಂದ ಸಿಟ್ಟಿಗೆದ್ದ ಆರೋಪಿ ಕಟ್ಟಿಗೆಯಿಂದ ತಂದೆಯ ಹಣೆಗೆ ಹೊಡೆದು, ಸಿಮೆಂಟ್ ರೋಡ್ ಗೆ ನೂಕಿದ್ದರಿಂದ ತೀವ್ರ ಗಾಯಗೊಂಡು, ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಗುಡೆಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.