

ಮಂಗಳೂರು: ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನಲ್ಲಿ 1999ರಲ್ಲಿ ಮೊದಲ ಬ್ಯಾಚ್‌ನ ಎಂ.ಬಿ.ಬಿ.ಎಸ್. ಪದವಿ ಪಡೆದ ವಿದ್ಯಾರ್ಥಿಗಳ 25ನೇ ವರ್ಷಾಚರಣೆ ಮತ್ತು ಗುರುವಂದನ ಕಾರ್ಯಕ್ರಮ ಇತ್ತೀಚೆಗೆ ಜರುಗಿತು.
ಫಾದರ್ ಮುಲ್ಲರ್ ಚಾಪೆಲ್‌ನಲ್ಲಿ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನ ಆಡಳಿತಾಧಿಕಾರಿ ಫಾ. ಅಜಿತ್ ಮಿನೇಜಸ್ ಅವರು ಪವಿತ್ರ ಪೂಜೆ ನೆರೆವೇರಿಸಿದರು.
ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನ ಮಾಜಿ ಡೀನ್ ಡಾ.ಸಂಜೀವ್ ರೈ ಮತ್ತು ಮಾಜಿ ಆಡಳಿತಾಧಿಕಾರಿ ಫಾದರ್ ಡೆನ್ನಿಸ್ ಡೆಸಾ ಉಪಸ್ಥಿತರಿದ್ದರು. ಫಾದರ್ ಮುಲ್ಲರ್ ಚಾರಿಟೇಬಲ್ ಇನ್ಸ್ಟಿಟ್ಯೂಶನ್ ನಿರ್ದೇಶಕರಾದ ಫಾ.ರಿಚರ್ಡ್ ಕುವೆಲ್ಲೊ, ಫಾ. ಅಜಿತ್ ಮಿನೇಜಸ್, ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನ ಆಡಳಿತಾಧಿಕಾರಿ ಫಾ. ವಲೇರಿಯನ್ ಡಿಸೋಜ ಮತ್ತು ಫಾ.ವಿಲಿಯಂ ಮಿನೇಜಸ್, ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನ ಮಾಜಿ ಆಡಳಿತಾಧಿಕಾರಿ ಡಾ. ಆಂಟನಿ ಎಸ್ ಡಿಸೋಜ ಮೊದಲಾದವರಿದ್ದರು.
ಕನ್ಸಲ್ಟೆಂಟ್ ವಿಟ್ರಿಯೊ ರೆಟಿನಲ್ ಸರ್ಜನ್ ಮತ್ತು ಕೆಎಂಸಿ ಮಂಗಳೂರಿನ ನೇತ್ರಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ.ಗ್ಲಾಡಿಸ್ ರೊಡ್ರಿಗಸ್ ಮತ್ತು ಮಂಗಳೂರಿನ ಫಿಸಿಯೊಲಾಜಿಸ್ಟ್ ಮತ್ತು ಕುಟುಂಬ ವೈದ್ಯೆ ಡಾ. ಕುಸುಮಾ ಸಚಿನ್ ನಿರೂಪಿಸಿದರು. ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನ ವೈದ್ಯಕೀಯ ವಿಭಾಗದ ಪ್ರಾಧ್ಯಾಪಕಿ ಹಾಗೂ ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷೆ ಡಾ.ಅರ್ಚನಾ ಭಟ್ ಸ್ವಾಗತಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಯುಕೆ ಕೋವೆಂಟ್ರಿಯ ಸಲಹೆಗಾರ ಆಂಕೊಪಾಥಾಲಜಿಸ್ಟ್ ಡಾ.ಅನೀಶ್ಯಾ ಪ್ರಸಾದ್ ಅವರಿಂದ ನೃತ್ಯ ಪ್ರದರ್ಶನ ನಡೆಯಿತು. 99ರ ಬ್ಯಾಚ್‌ನ ಶಿಕ್ಷಣಕ್ಕೆ ಸಹಕರಿಸಿದ ಶಿಕ್ಷಕರು ಮತ್ತು ವೈದ್ಯಕೀಯೇತರ ಸಿಬ್ಬಂದಿಗೆ ಅಭಿನಂದನೆಗಳನ್ನು ಸಲ್ಲಿಸಲಾಯಿತು.
ಅಗಲಿದ ಶಿಕ್ಷಕರಿಗೆ ಶ್ರದ್ಧಾಂಜಲಿಗಳನ್ನು ಪ್ರದರ್ಶಿಸುವ ಸ್ಲೈಡ್‌ಶೋಗಳು, ಕ್ಯಾಂಪಸ್ ನೆನಪುಗಳು ಮತ್ತು ಗೈರುಹಾಜರಾದವರ ವೀಡಿಯೊ ಸಂದೇಶಗಳು ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಯಿತು. ಕೆಎಂಸಿ ಮಂಗಳೂರಿನ ತುರ್ತು ಚಿಕಿತ್ಸಾ ವಿಭಾಗದ ಮುಖ್ಯಸ್ಥ ಮತ್ತು ಮಣಿಪಾಲ್ ಆಸ್ಪತ್ರೆಗಳ (ಗೋವಾ, ಮಂಗಳೂರು ಮತ್ತು ಕೇರಳ) ತುರ್ತು ಚಿಕಿತ್ಸಾ ವಿಭಾಗದ ಪ್ರಾದೇಶಿಕ ಮುಖ್ಯಸ್ಥರಾದ ಡಾ. ಜೀಧು ರಾಧಾಕೃಷ್ಣನ್ ಅವರು ವಂದಿಸಿದರು.