ಫಾದರ್ ಬ್ಯಾಪ್ಟಿಸ್ಟ್ ಮಿನೇಜಸ್ ಗೌರವಾರ್ಥ ಬಲಿಪೂಜೆ

mng--27 Aug Father mullar
Published on

ಮಂಗಳೂರು: ಫಾದರ್ ಮುಲ್ಲರ್ ಚಾರಿಟಬಲ್ ಸಂಸ್ಥೆಗಳ ಆಡಳಿತ ಮಂಡಳಿಯಿಂದ ಮಾಜಿ ನಿರ್ದೇಶಕ ಮಾನ್ಸೆಂಯೂರ್ ಫಾದರ್ ಬ್ಯಾಪ್ಟಿಸ್ಟ್ ಮಿನೇಜಸ್ ಅವರ ಗೌರವಾರ್ಥ ಶನಿವಾರ ಬಲಿಪೂಜೆಯನ್ನು ನೆರವೇರಿಸಲಾಯಿತು.


ಫಾದರ್ ಮುಲ್ಲರ್ ಸಮೂಹ ಸಂಸ್ಥೆಗಳ ನಿರ್ದೇಶಕ ಫಾ.ರಿಚರ್ಡ್ ಅಲೋಶಿಯಸ್ ಕೊಯೆಲೊ ಅವರ ನೇತೃತ್ವದಲ್ಲಿ ಫಾದರ್ ಮುಲ್ಲರ್ ಆಡಳಿತ ಮಂಡಳಿಯ ಧರ್ಮಗುರುಗಳೊಂದಿಗೆ ಹಾಗು ಮಂಗಳೂರು ಧರ್ಮಪ್ರಾಂತ್ಯದ ವಿಶ್ರಾಂತ ಬಿಷಪ್ ಡಾ.ಅಲೋಶಿಯಸ್ ಪಾವ್ಲ್ ಡಿಸೋಜ, ಸೇಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ನಿರ್ದೇಶಕ ರೆ.ಫಾ. ಪ್ರಕಾಶ್ ಡಿಸೋಜ ಅವರೊಂದಿಗೆ ಬಲಿಪೂಜೆಯನ್ನು ನೆರವೇರಿಸಿದರು.


ಫಾ.ಅಜಿತ್ ಬಿ.ಮೆನೇಜಸ್ ಪ್ರವಚನ ಬೋಧಿಸಿದರು. ಫಾ.ಬ್ಯಾಪ್ಟಿಸ್ಟ್ ಭಗವಂತನ ಮೇಲೆ ಅತಿಯಾದ ನಂಬಿಕೆಯನ್ನು ಇಟ್ಟಿದ್ದರು. ಆಧುನಿಕ ಮೂಲಸೌಕರ್ಯ ಮತ್ತು ಆರೋಗ್ಯ ಶಿಕ್ಷಣದ ಮೂಲಕ ಆರೋಗ್ಯ ರಕ್ಷಣೆಯನ್ನು ಸಾರ್ವಜನಿಕರಿಗೆ ಹತ್ತಿರ ತರಲು ಶ್ರಮಿಸಿದ್ದಾರೆ ಎಂದರು.


ಫಾ. ರಿಚರ್ಡ್ ಕೊಯೆಲ್ಹೋ ಶ್ಲಾಘನೆಯನ್ನು ಓದಿದರು. ಫಾ. ಬ್ಯಾಪ್ಟಿಸ್ಟ್ ಅವರೊಂದಿಗಿನ ಒಡನಾಟವನ್ನು ನೆನೆದು ಕಣ್ಣೀರಿನ ವಿದಾಯ ಹೇಳಿದರು.
ಫಾದರ್ ಮುಲ್ಲರ್ ಹೋಮಿಯೋಪತಿ ಆಸ್ಪತ್ರೆಯ ಆಡಳಿತ ಅಧಿಕಾರಿ ಫಾ.ರೋಷನ್ ಕ್ರಾಸ್ತಾ, ಫಾದರ್ ಮುಲ್ಲರ್ ಚಾರಿಟೇಬಲ್ ಆಸ್ಪತ್ರೆ, ತುಂಬೆ ಇದಾರ ಅಡಳಿತಾಧಿಕಾರಿ ಫಾ.ವಿನ್ಸೆಂಟ್ ಡಿಸೋಜಾ, ಫಾ.ಜೀವನ್ ಸಿಕ್ವೇರಾ, ಫಾ. ನೆಲ್ಸನ್ ಪೈಸ್ ಮುಂತಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net