ತಂದೆ, ತಾಯಿ, ಗುರುವೇ ಹೀರೋ

Untitled-4
ಸರ್ಜಾಪುರದ ಧರ್ಮಸಾಗರ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ವಿಜಯವಾಣಿ ಪತ್ರಿಕೆಯ ವಿದ್ಯಾರ್ಥಿ ಮತ್ತು ಉದ್ಯೋಗ ಮಿತ್ರ ಪತ್ರಿಕೆ ಹಾಗೂ ಚೆಕ್​ ಅನ್ನು ಧರ್ಮಸಾಗರ ವಿದ್ಯಾಸಂಸ್ಥೆ ಖಜಾಂಚಿ ಡಾ.ಡಿ.ವಿ.ಧನರಾಜ್​ ವಿತರಿಸಿದರು. ಉಪಾಧ್ಯಕ್ಷ ಅಶ್ವತ್ಥ ನಾರಾಯಣ ರೆಡ್ಡಿ, ಕಾರ್ಯದರ್ಶಿ ಶಾಂತಕುಮಾರ್​, ನಿರ್ದೇಶಕರಾದ ಡಿ.ಎಸ್​.ಕೃಷ್ಣಪ್ಪ, ಎಸ್​.ಆರ್​.ವೆಂಕಟಸ್ವಾಮಿ, ಧರ್ಮಸಾಗರ ಪ್ರೌಢಶಾಲೆ 1990&93ನೇ ಸಾಲಿನ ಹಳೆ ವಿದ್ಯಾರ್ಥಿಗಳ ಎಜುಕೇಶನ್​ ಚಾರಿಟೆಬಲ್​ ಟ್ರಸ್ಟ್​ ಅಧ್ಯಕ್ಷ ಕೇಶವ್​ ಬಾಬುರೆಡ್ಡಿ ಇತರರು ಇದ್ದರು.
Published on

ಸರ್ಜಾಪುರ : ಪರದೆ ಮೇಲೆ ಕಾಣಿಸುವ, ಪಾತ್ರಧಾರಿಗಳು, ನಟರನ್ನು ಹಿರೋಗಳೆಂದು ತಿಳಿಯುವ ಬದಲು ತಂದೆ, ತಾಯಿ ಮತ್ತು ಗುರುಗಳನ್ನು ನಿಜವಾದ ಹೀರೋಗಳನ್ನಾಗಿ ನೋಡಬೇಕಿದೆ ಎಂದು ದೊಮ್ಮಸಂದ್ರ ಗ್ರಾಪಂ ಮಾಜಿ ಉಪಾಧ್ಯಕ್ಷರೂ ಆದ ಧರ್ಮಸಾಗರ ವಿದ್ಯಾಸಂಸ್ಥೆ ಖಜಾಂಚಿ ಡಾ.ಡಿ.ವಿ.ಧನರಾಜ್​ ತಿಳಿಸಿದರು. ಸರ್ಜಾಪುರ ಸಮೀಪದ ದೊಮ್ಮಸಂದ್ರದ ಧರ್ಮಸಾಗರ ವಿದ್ಯಾ ಸಂಸ್ಥೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಧರ್ಮಸಾಗರ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ವಿಜಯವಾಣಿ ವಿದ್ಯಾರ್ಥಿ ಮತ್ತು ಉದ್ಯೋಗ ಮಿತ್ರ ಪತ್ರಿಕೆಗಳನ್ನು ಒಂದು ವರ್ಷಗಳ ಅವಧಿಗೆ ಉಚಿತವಾಗಿ ವಿತರಣೆ ಮಾಡಿ ಮಾತನಾಡಿದರು. ವಿದ್ಯಾರ್ಥಿಗಳು ಉತ್ತಮ ಹವ್ಯಾಸಗಳನ್ನು ರೂಢಿಸಿಕೊಂಡು, ಉನ್ನತ ಹುದ್ದೆ ಅಲಂಕರಿಸಬೇಕು ಎಂದು ಹೇಳಿದರು.

ದೊಮ್ಮಸಂದ್ರ ಗ್ರಾಪಂ ಸದಸ್ಯೆ ಅಂಬುಜಾ ಧನರಾಜ್​ ಮಾತನಾಡಿ, ಕಳೆದ ನಾಲ್ಕೈದು ವರ್ಷಗಳಿಂದ ನಿರಂತರವಾಗಿ ಧರ್ಮಸಾಗರ ಪದವಿ ಮತ್ತು ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಅನುಕೂಲವಾಗಿರುವ ವಿದ್ಯಾರ್ಥಿ ಮಿತ್ರ ಪತ್ರಿಕೆಯನ್ನು ಉಚಿತವಾಗಿ ಸಂಸ್ಥೆಯಿಂದ ನೀಡಲಾಗುತ್ತಿದೆ. ಪ್ರತಿದಿನ ನಮ್ಮ ಪೆಟ್ರೋಲ್​ ಬಂಕ್​ನಲ್ಲಿ ಗ್ರಾಹಕರಿಗೆ ವಿಜಯವಾಣಿ ಪತ್ರಿಕೆ ನೀಡಲಾಗುತ್ತಿದೆ. ವಿಜಯವಾಣಿ ಪತ್ರಿಕೆ ಹೊರತಂದಿರುವ ವಿದ್ಯಾರ್ಥಿ ಮತ್ತು ಉದ್ಯೋಗ ಮಿತ್ರ ಪತ್ರಿಕೆಯು ವಿದ್ಯಾರ್ಥಿಗಳ ನಿಜವಾದ ಸ್ನೇಹಿತನಾಗಿದ್ದು, ನಿತ್ಯ ಪಾಠದ ಜತೆಗೆ ವಿದ್ಯಾರ್ಥಿ ಮಿತ್ರ ಪತ್ರಿಕೆಯು ಜೀವನ ರೂಪಿಸಿಕೊಳ್ಳಲು ಮತ್ತು ಉತ್ತಮ ಸ್ನೇಹಿತನಾಗಿ ಜತೆ ನಿಲ್ಲುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಉಚಿತವಾಗಿ ಸಿಗುತ್ತದೆ ಎಂಬ ಮನೋಭಾವನೆ ಬಿಟ್ಟು ತಮಗೆ ನೀಡುವ ಪತ್ರಿಕೆಗಳನ್ನು ಅಭ್ಯಾಸ ಮಾಡಿ ಉತ್ತಮ ಭವಿಷ್ಯ ಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದರು. ಪ್ರಾಂಶುಪಾಲ ಡಾ.ನರೇಶ್​ ರಾಜ್​, ಪ್ರೊ.ಅಶೋಕ್​ ಬೆನ್ನಿ, ಪ್ರೌಢಶಾಲಾ ಮುಖ್ಯಸ್ಥೆ ವಿದ್ಯಾ, ಶಿಕ್ಷಕರಾದ ಕೆ.ಆರ್​.ಈಶ್ವರಪ್ಪ, ಮಂಜುನಾಥ್​ ಇದ್ದರು.

ಶೈಕ್ಷಣಿಕ ಸಮಾಜಕ್ಕೆ ಬುನಾದಿಯಾಗಿ : ವಿದ್ಯಾರ್ಥಿ ಮಿತ್ರ ಪತ್ರಿಕೆಯು ವಿದ್ಯಾರ್ಥಿಗಳ ಜೀವನ ಬದಲಾಯಿಸುವ ಪತ್ರಿಕೆಗಳಾಗಿದೆ. ಹುಟ್ಟುಹಬ್ಬ ಆಚರಿಸುವ ಬದಲಾಗಿ ಸಮಾಜದಲ್ಲಿ ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದುಳಿದ ಸಮುದಾಯವನ್ನು ಮೇಲೆತ್ತಲು ಬುನಾದಿ ಆಗಬೇಕು. ಅ ನಿಟ್ಟಿನಲ್ಲಿ ನಮ್ಮ ತಂದೆ ಡಾ.ಡಿ.ವಿ.ಧನರಾಜ್​ ಅವರ ಜನ್ಮದಿನದ ನಿಮಿತ್ತ ನಾಲ್ಕೈದು ವರ್ಷಗಳಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಮಿತ್ರ ಪತ್ರಿಕೆ ವಿತರಣೆ ಮಾಡಲಾಗುತ್ತಿದೆ ಎಂದು ವಿ.ಎಸ್​.ಫ್ಯೂಯೆಲ್ಸ್​ ಮಾಲೀಕ ಡಿ.ಭರತ್​ ಮತ್ತು ನಯನಾ ದಂಪತಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net