ಮಾದಕ ವ್ಯಸನಿ ಮಗನಿಂದ ತಂದೆಯ ಹತ್ಯೆ

Father killed by drug addict son
ಆರೋಪಿ ಅಮಿತ್ ಕೂಡಿಗನೂರ
Published on

ವಿಜಯಪುರ : ಮಾದಕ ವ್ಯಸನಿ ಮಗ ತನ್ನ ತಂದೆಯನ್ನೇ ಕಲ್ಲು ಎತ್ತಿಹಾಕಿ ಹತ್ಯೆ ಮಾಡಿರುವ ಘಟನೆ ನಗರದ ವೆಂಕಟೇಶ ನಗರದಲ್ಲಿ ಮಂಗಳವಾರ ಬೆಳಗಿನಜಾವ ನಡೆದಿದೆ. ರಮೇಶ ಕೂಡಿಗನೂರ ಹತ್ಯೆಯಾಗಿದ್ದು, ಆತನ ಪುತ್ರ ಅಮಿತ್ ಕೂಡಿಗನೂರ ಆರೋಪಿಯಾಗಿದ್ದಾನೆ.

ಹಂತಕ ಅಮಿತ್ ಇಂಜಿನಿಯರ್ ಕಲಿಯುವಾಗಲೇ ಮಾದಕ ವ್ಯಸನಕ್ಕೆ ಸಿಲುಕಿದ್ದ. ಬಳಿಕ ಬೆಂಗಳೂರಿನ ಅತ್ಯುತ್ತಮ ಖಾಸಗಿ ಕಂಪನಿಯಲ್ಲಿ ಕೆಲಸಮಾಡುತ್ತಾ ಕೈತುಂಬಾ ದುಡಿಯುತ್ತಿದ್ದ. ಮತ್ತೆ ಅತಿಯಾಗಿ ವ್ಯಸನಕ್ಕೆ ಅಂಟಿಕೊಂಡು ಕೆಲಸ ಬಿಟ್ಟು ಬಂದಿದ್ದ. ಕುಟುಂಬದವರು ಸೂಕ್ತ ಚಿಕಿತ್ಸೆಯನ್ನೂ ಕೊಡಿಸಿದ್ದರು ಪೂರ್ಣ ಗುಣಮುಖನಾಗಿರಲಿಲ್ಲ ಎಂದು ಕುಟುಂಬ ಮೂಲದಿಂದ ತಿಳಿದಿದೆ.

ದುಶ್ಚಟ ಬಿಡುವ ವಿಚಾರಕ್ಕೆ ಮನೆಯಲ್ಲೂ ಆಗಾಗ್ಗೆ ಜಗಳವಾಗುತ್ತಿತ್ತಂತೆ. ಮಂಗಳವಾರ ಬೆಳಗಿನ ಜಾವ ಮನೆಯ ರೂಮಿನಲ್ಲಿ ಮಲಗಿದ್ದ ತಂದೆಯ ತಲೆಯ ಮೇಲೆ ಆರೋಪಿ ಅಮೀತ್ ಸೈಜುಗಲ್ಲು ಎತ್ತಿಹಾಕಿ, ಯಾರಿಗೂ ಗೊತ್ತಾಗದಂತೆ ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ. ಬೆಳಗ್ಗೆ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಜಲನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಪರಿಶೀಲನೆ ನಡೆಸಿದ್ದಾರೆ.

ಇಂದಿನ ಯುವಕ-ಯುವತಿಯರು ಮಾದಕ ವ್ಯಸನಗಳಿಂದ ದೂರವಿರಬೇಕು. ಮಕ್ಕಳ ಬಗ್ಗೆ ಪಾಲಕರು ಹೆಚ್ಚಿನ ಜಾಗೃತಿ ವಹಿಸಬೇಕು. ಸರ್ಕಾರ ಮಾದಕ ವಸ್ತುಗಳು ಪೂರೈಕೆಯಾಗದಂತೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಬೇಕಿದೆ.
ವಿಜಯಕುಮಾರ ಕೂಡಿಗನೂರ, ಹತ್ಯೆಯಾದವರ ಸಹೋದರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net