ತಂದೆಯೇ ಮಾದರಿ ನಾಯಕ

Published on

ವಿಜಯಪುರ : ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಹಗಲು&ರಾತ್ರಿ ಎನ್ನದೆ ದುಡಿಯುವ ತಂದೆಯೇ ಮಾದರಿ ನಾಯಕ ಎಂದು ಶಾಂತಿನಿಕೇತನ ಶಿಕ್ಷಣ ಸಂಸ್ಥೆ ನಿರ್ದೇಶಕಿ ದಿವ್ಯಾ ಬಿರಾದಾರ ಹೇಳಿದರು.

ಇಲ್ಲಿನ ಆದರ್ಶನಗರ ಬಡಾವಣೆಯ ಶಾಂತಿನಿಕೇತನ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ತಂದೆ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಂದೆಯು ತನ್ನ ಸುಖ, ಸಂತೋಷ ಮರೆತು ತನ್ನ ದುಡಿಮೆಯಿಂದ ಮಕ್ಕಳ ಭವಿಷ್ಯ ರೂಪಿಸುತ್ತಾನೆ ಎಂದರು.

ಪ್ರಾಚಾಯೆರ್ ಫರೀನ್​ ಖಾನ್​ ಮಾತನಾಡಿ, ಮಕ್ಕಳ ಶಿಣ ಮತ್ತು ಜೀವನದಲ್ಲಿ ತಂದೆಯ ಮಹತ್ವದ ಕುರಿತು ತಿಳಿಸಿದರು. ಶಾಲಾ ಮಕ್ಕಳ ತಂದೆಗಳಿಗಾಗಿ ವಿಶೇಷ ಕ್ರೀಡೆಗಳು ನಡೆದವು. ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಶಿಕಿ ಉಮಾ ಬಡಾನೂರ್​ ಮತ್ತು ಅಪ್ಸರಾ ಸಿಂದಗಿಕರ ನಿರೂಪಿಸಿದರು. ಸಹನಾ ಕೊಲಕುಂಬಿ ಸ್ವಾಗತಿಸಿದರು. ಸಿಮಾ ಸದಲಗಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net