ಅಪ್ತಾಪ್ತೆ ಮೇಲೆ ಸೋದರಮಾವನಿಂದ ಅತ್ಯಾಚಾರ

Published on

ನಂಜನಗೂಡು: ಅಪ್ರಾಪ್ತೆ ಮೇಲೆ ತನ್ನ ಸೋದರ ಮಾವನೇ ಅತ್ಯಾಚಾರ ಎಸಗಿರುವ ಕುರಿತು ನಂಜನಗೂಡಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನಗರದ ನಿವಾಸಿ ರಾಜೇಶ್ ಅಲಿಯಾಸ್ ದೈತ್ಯ ರಾಜು ಮೇಲೆ ಆತನ ಸಹೋದರಿಯೇ ಪೋಕ್ಸೋ ಕೇಸ್ ದಾಖಲಿಸಿದ್ದಾರೆ.

ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿರುವ 16 ವರ್ಷದ ಅಪ್ರಾಪ್ತೆಯನ್ನು ಟ್ಯೂಷನ್ನಿಗೆ ಬಿಡುವ ನೆಪದಲ್ಲಿ ಸೋದರ ಮಾವ ರಾಜೇಶ್ ಅಲಿಯಾಸ್ ದೈತ್ಯ ರಾಜು ತನ್ನ ಕಾರಿನಲ್ಲಿ ತನ್ನ ಮನೆಗೆ ಕರೆದುಕೊಂಡು ಹೋಗಿ ಬಲವಂತವಾಗಿ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ. ಘಟನೆ ಬಳಿಕ ಸಂತ್ರಸ್ತ ಬಾಲಕಿ ತನ್ನ ತಾಯಿ, ಅಜ್ಜಿ ಬಳಿಕ ನಡೆದ ವಿಷಯವನ್ನೆಲ್ಲಾ ಹೇಳಿಕೊಂಡಿದ್ದಾಳೆ.

ಈ ಬಗ್ಗೆ ಸಂತ್ರಸ್ತ ಬಾಲಕಿಯ ತಾಯಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಪೋಕ್ಸೋ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ಆರೋಪಿಯು ನಾಪತ್ತೆಯಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net