ಮಕ್ಕಳಾಗದ್ದಕ್ಕೆ ಗಂಡ-ಹೆಂಡತಿ ಜಗಳ; ಮಾವನ ಕೊಲೆ!

murder
Published on

ಬೆಳಗಾವಿ: ಇಬ್ಬರ ಜಗಳದಲ್ಲಿ ಮೂರನೆಯವನಿಗೆ ಲಾಭ ಎಂಬ ಗಾದೆಯನ್ನು ಸುಳ್ಳಾಗಿಸಿದ ಪ್ರಕರಣವಿದು. ಮಕ್ಕಳಾಗಿಲ್ಲ ಎಂಬ ಕುರಿತು ಗಂಡ-ಹೆಂಡತಿ ನಡುವೆ ನಡೆದ ಜಗಳಕ್ಕೆ ಮಾವ ಬಲಿಯಾಗಿದ್ದಾರೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಇಟ್ನಾಳ ಗ್ರಾಮದಲ್ಲಿ ನಿನ್ನೆ ತಡರಾತ್ರಿ ಈ ಅನಾಹುತ ನಡೆದಿದೆ. ಸಿದ್ದಪ್ಪ ರಾಯಪ್ಪ ಖೋತ (54) ಅಳಿಯನಿಂದಲೇ ಕೊಲೆಯಾದ ದುರ್ದೈವಿ. ಬಾಳೇಶ ಶ್ರೀಕಾಂತ ಬೋರಣ್ಣವರ (38) ಕೊಲೆ ಆರೋಪಿ.

ತಂದೆ ಸಿದ್ದಪ್ಪ ಮಗಳ ಮನೆಗೆ ಬಂದಿದ್ದಾಗ ಅಲ್ಲಿ ಮಗಳು-ಅಳಿಯ ಮಕ್ಕಳಾಗಿಲ್ಲ ಎಂಬ ಕಾರಣಕ್ಕೆ ಜಗಳವಾಡಿಕೊಂಡಿದ್ದರು. ಗಂಡ-ಹೆಂಡತಿಯ ಜಗಳ ವಿಕೋಪಕ್ಕೆ ಹೋದಾಗ ಮಧ್ಯಪ್ರವೇಶಿಸಿದ ಸಿದ್ದಪ್ಪ ಅವರಿಗೆ, ಅಳಿಯ ಬಾಳೇಶ ಪೈಪ್​ನಿಂದ ತಲೆಗೆ ಹೊಡೆದಿದ್ದ. ಹೊಡೆತದ ರಭಸಕ್ಕೆ ಸ್ಥಳದಲ್ಲೇ ಕುಸಿದು ಬಿದ್ದ ಸಿದ್ದಪ್ಪ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ. ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net