ಅಪ್ರಾಪ್ತ ಮಗನಿಗೆ ಬೈಕ್ ಕೊಟ್ಟ ತಂದೆಗೆ ದಂಡ

Bike Wheeling (1)
Published on

ಹುಬ್ಬಳ್ಳಿ: ಉಣಕಲ್ಲ ಹತ್ತಿರ ಬೈಕ್ ವ್ಹೀಲಿಂಗ್ ಮಾಡಿದ್ದ ವಾಹನವನ್ನು ಸೀಜ್ ಮಾಡಿ, ಅಪ್ರಾಪ್ತನಿಗೆ ಬೈಕ್ ನೀಡಿದ ಆತನ ತಂದೆಗೆ ನ್ಯಾಯಾಲಯ 25 ಸಾವಿರ ರೂ. ದಂಡ ವಿಧಿಸಿದೆ.

ಹಳೇ ಹುಬ್ಬಳ್ಳಿಯ ಅಬ್ದುಲ್ ರಸೂಲ್‌ಖಾನ್ ಅವರ ಬೈಕ್ ಅನ್ನು ಅವರ ಮಗ ಉಣಕಲ್ ಬಳಿ ವ್ಹೀಲಿಂಗ್ ಮಾಡಿದ್ದರಿಂದ ಪ್ರಕರಣ ದಾಖಲಾಗಿತ್ತು. ಈ ಕುರಿತು ಕೋರ್ಟ್ ದಂಡ ವಿಧಿಸಿ, ಆತನ ಪಾಲಕರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕಾಗಿ ನೋಟಿಸ್ ಜಾರಿ ಮಾಡಿದೆ ಎಂದು ಉತ್ತರ ಸಂಚಾಠ ಠಾಣೆ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net