ಅಪ್ಪನಿಂದ ಮಗನ ಮೃತದೇಹ ದಾನ

amrut
Published on

ಹೆಬ್ರಿ: ಹೆಬ್ರಿಯ ಭಾಗವತ ಗಣೇಶ್ ಕುಮಾರ್ ಹೆಬ್ರಿ ಅವರ ಪುತ್ರ ಅಮೃತ್ ರಾಜ್(21) ಶುಕ್ರವಾರ ಅನಾರೋಗ್ಯದಿಂದ ಮೃತರಾದರು. ಮಂಗಳೂರಿನ ಮೆಡಿಕಲ್ ಕಾಲೇಜಿನಲ್ಲಿ ಫಿಜಿಯೋಥೆರಪಿ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ಅಮೃತ್‌ರಾಜ್ ತೀವ್ರ ಅನಾರೋಗ್ಯದಿಂದ ಶಿಕ್ಷಣ ಅರ್ಧಕ್ಕೆ ಮೊಟಕುಗೊಳಿಸಿದ್ದರು. ತಂದೆ, ತಾಯಿ ಸಹೋದರನನ್ನು ಅಗಲಿದ್ದಾರೆ. ಮಗನ ಮೃತದೇಹವನ್ನು ತಂದೆ ಮಣಿಪಾಲ ಕೆಎಂಸಿ ಆಸ್ಪತ್ರೆ ವೈದ್ಯಕೀಯ ಶಿಕ್ಷಣಕ್ಕೆ ದಾನ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net