ಅಪಘಾತದಲ್ಲಿ ತಂದೆ ಸಾವು, ಮಕ್ಕಳಿಬ್ಬರಿಗೆ ಗಾಯ

Published on

ಅಥಣಿ ಗ್ರಾಮೀಣ: ಅಥಣಿ ತಾಲೂಕಿನ ಬಳ್ಳಿಗೇರಿ ಗ್ರಾಮದ ಹೊರವಲಯದ ಜತ್ತ&ಜಾಂಬೋಟಿ ರಾಜ್ಯ ಹೆದ್ದಾರಿ ಮೇಲೆ ಕೆಎಸ್​ಆರ್​ಟಿಸಿ ಬಸ್​ ಹಾಗೂ ದ್ವಿಚಕ್ರ ವಾಹನ ಡಿಕ್ಕಿಯಾಗಿ ತಂದೆ ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಮಕ್ಕಳು ಗಾಯಗೊಂಡಿರುವ ಟನೆ ಮಂಗಳವಾರ ಸಂಭವಿಸಿದೆ.

ತಾಲೂಕಿನ ಮಲಾಬಾದ ಗ್ರಾಮದ ನೂರ್​ ಮಹಮ್ಮದ್​ ಮುಲ್ಲಾ (50) ಮೃತ. ಅವರ ಮಕ್ಕಳಾದ ಸೊಹೆಲ್​ ನೂರ್​ ಮುಲ್ಲಾ (22), ಶಾಹಿದ್​ ನೂರ್​ ಮುಲ್ಲಾ (18) ಗಾಯಗೊಂಡವರು. ಇವರು ಬೈಕ್​ ಮೇಲೆ ಬೇವನೂರ ಗ್ರಾಮದಿಂದ ಮಲಾಬಾದ ಕಡೆಗೆ ಮರಳುವಾಗ ದುರ್ಟನೆ ಸಂಭವಿಸಿದೆ. ಗಾಯಾಳುಗಳನ್ನು ಅಥಣಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಅಥಣಿ ಠಾಣೆ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net