ಪುತ್ರನನ್ನು ಶಾಲೆಗೆ ಸೇರಿಸಲು ಬೆಳಗಾವಿಯಿಂದ ಕಾಪುವಿಗೆ ಬಂದ ತಂದೆ ಅಪಘಾತಕ್ಕೆ ಬಲಿ, ಪುತ್ರ ಗಂಭೀರ

Road Accident
Published on

ಪಡುಬಿದ್ರಿ: ರಾಷ್ಟ್ರೀಯ ಹೆದ್ದಾರಿ 66ರ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದ ಮುಂಭಾಗ ಅಪರಿಚಿತ ವಾಹನವೊಂದು ಡಿಕ್ಕಿಯಾಗಿ ತಂದೆ ಸ್ಥಳದಲ್ಲೇ ಮೃತಪಟ್ಟು ಪುತ್ರ ತೀವ್ರ ಗಾಯಗೊಂಡು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಬೆಳಗಾವಿ ಮೂಲದ ಪ್ರಭಾಕರ್ ಕೋತ ಮೃತರು. ಪುತ್ರ ಸಮರ್ಥ್(14) ಗಾಯಾಳು. ಪ್ರಭಾಕರ್ ಹಾಗೂ ಸಮರ್ಥ್ ಮಂಗಳವಾರ ರಾತ್ರಿ ಬೆಳಗಾವಿಯಿಂದ ಸರ್ಕಾರಿ ಬಸ್‌ನಲ್ಲಿ ಹೊರಟು ಕಾಪು ಸಮೀಪದ ಕುತ್ಯಾರಿನ ಆನೆಗುಂದಿ ಸಂಸ್ಥಾನದ ವಿದ್ಯಾಸಂಸ್ಥೆಯಲ್ಲಿ ಪುತ್ರನನ್ನು ದಾಖಲಾತಿ ಮಾಡಲು ಆಗಮಿಸಿದ್ದರು. ಉಚ್ಚಿಲದಲ್ಲಿ ಬಸ್ಸಿನಿಂದ ಇಳಿದು ರಸ್ತೆ ಪಕ್ಕ ನಿಂತಿದ್ದಾಗ ವಾಹನ ಡಿಕ್ಕಿಯಾಗಿದೆ.

ವೃತ್ತ ನಿರೀಕ್ಷಕ, ಕೆ.ಸಿ.ಪೂವಯ್ಯ, ಪಡುಬಿದ್ರಿ ಠಾಣಾಧಿಕಾರಿ ಪುರುಷೋತ್ತಮ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net