ಬೈಕ್ ಡಿಕ್ಕಿಯಾಗಿ ತಂದೆ ಸಾವು, ಮಗನ ಕಾಲು ಮುರಿತ

accident
Published on

ಪಡುಬಿದ್ರಿ: ಶಿರ್ವ ಠಾಣೆ ವ್ಯಾಪ್ತಿಯ ಬಂಟಕಲ್ ಪೇಟೆಯಲ್ಲಿ ಬುಧವಾರ ರಸ್ತೆ ಬದಿ ನಿಂತಿದ್ದ ತಂದೆ ಹಾಗೂ ಮಗನಿಗೆ ಬೈಕ್ ಡಿಕ್ಕಿಯಾಗಿ ಬಾಗಲಕೋಟೆ ಜಲಕಮಲದಿನ್ನಿ ಶರಣಪ್ಪ ಬಾಲಪ್ಪ ಗಂಜಿಹಾಳ(40) ಮೃತಪಟ್ಟಿದ್ದು,ಮಗ ಶ್ರವಣಕುಮಾರ(6) ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ.

ಕೂಲಿ ಕಾರ್ಮಿಕನಾಗಿದ್ದ ಶರಣಪ್ಪ ದಿನಸಿ ಸಾಮಗ್ರಿ ತರಲು ಮಗನೊಂದಿಗೆ ಪೇಟೆಗೆ ತೆರಳಿದ್ದು, ರಸ್ತೆ ಬದಿ ನಿಂತಿದ್ದ ಅವರಿಗೆ ಶಿರ್ವದ ಕಡೆ ಸಾಗುತ್ತಿದ್ದ ಬೈಕ್ ಡಿಕ್ಕಿಯಾಗಿದೆ. ಗಂಭೀರ ಗಾಯಗೊಂಡಿದ್ದ ಇಬ್ಬರನ್ನೂ ಸ್ಥಳೀಯರು ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ತಲೆಗೆ ಗಂಭೀರ ಗಾಯವಾಗಿದ್ದ ಶರಣಪ್ಪ ಬುಧವಾರ ರಾತ್ರಿ ಮೃತಪಟ್ಟರೆ, ಮಗ ಶ್ರವಣಕುಮಾರ್‌ನ ಕಾಲಿನ ಮೂಳೆ ಮುರಿದಿದ್ದು ಚಿಕಿತ್ಸೆ ಪಡೆಯುತ್ತಿದ್ದಾನೆ.

ಘಟನೆ ಬಳಿಕ ಸವಾರ ಬೈಕ್ ಬಿಟ್ಟು ಪರಾರಿಯಾಗಿದ್ದು, ಸಿಸಿ ಕ್ಯಾಮರಾ ದೃಶ್ಯಗಳನ್ನಾಧರಿಸಿ ಆತನ ಸುಳಿವು ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net