

ವಿಜಯವಾಣಿ ಸುದ್ದಿಜಾಲ ಉಡುಪಿ
ಮಲ್ಪೆಯ ತೊಟ್ಟಂ ಸಂತ ಅನ್ನಮ್ಮ ಚರ್ಚ್ನ ವತಿಯಿಂದ ಹಿಂದು ಬಾಂಧವರ ಮನೆಗಳಿಗೆ ತೆರಳಿ ದೀಪಾವಳಿ ಹಬ್ಬದ ಶುಭಾಶಯ ವಿನಿಮಯದ ಮೂಲಕ ವಿಶಿಷ್ಟವಾಗಿ ಆಚರಿಸಲಾಯಿತು. ದೀಪಾವಳಿಯ ಪ್ರಯುಕ್ತ ಸತತ ಮೂರು ದಿನ ಚರ್ಚ್ ವ್ಯಾಪ್ತಿಯ ವಿವಿಧ ಹಿಂದು ಸಮಾಜದವರ ಮನೆಗೆ ತೆರಳಿದ ಕ್ರೈಸ್ತರು, ಸಿಹಿ ತಿಂಡಿ ಹಾಗೂ ಹಣತೆ ನೀಡಿ ಹಬ್ಬದ ಸಂಭ್ರಮ ವಿನಿಮಯ ಮಾಡಿಕೊಂಡರು.
ಚರ್ಚ್ನ ಪಾಲನಾ ಸಮಿತಿಯ ಉಪಾಧ್ಯಕ್ಷ ಲೆಸ್ಲಿ ಆರೋಝಾ, ಕಾರ್ಯದರ್ಶಿ ಬ್ಲೆಸಿಲ್ಲಾ ಕ್ರಾಸ್ತಾ, ಸ್ಥಳೀಯ ಕಾನ್ವೆಂಟ್ನ ಸಿಸ್ಟರ್ ಸುಶ್ಮಾ, ಸಿಸ್ಟರ್ ಶಾಲಿನಿ ಇತರರು ಉಪಸ್ಥಿತರಿದ್ದರು.
ದೀಪಾವಳಿಯು ಸಾರ್ವತ್ರಿಕ ಹಬ್ಬವಾಗಿದ್ದು ಎಲ್ಲರೂ ಆಚರಣೆ ಮಾಡುತ್ತೇವೆ. ದೀಪದ ಬೆಳಕು ಪ್ರತಿಯೊಬ್ಬರಿಗೂ ಸಮಾನವಾಗಿ ಹೇಗೆ ಲಭಿಸುತ್ತದೆಯೋ ಹಾಗೆಯೇ ದೀಪಾವಳಿ ಹಬ್ಬವನ್ನೂ ಸಹ ಪರಸ್ಪರ ಕೂಡಿ, ಸಂಭ್ರಮಿಸಿ, ಆಚರಣೆ ಮಾಡಿದಾಗ ಅದರ ಮಹತ್ವ ಇನ್ನಷ್ಟು ಹೆಚ್ಚಾಗುತ್ತದೆ. | ಡೆನಿಸ್ ಡೆಸಾ. ತೊಟ್ಟಂ ಚರ್ಚ್ನ ಫಾದರ್