ಮಾರ್ಕೆಟ್‌ನಲ್ಲಿ ತಂದೆ-ಮಗಳ ಹೈಡ್ರಾಮಾ!

love affair
Published on

ಪ್ರತಿಷ್ಠೆಗಾಗಿ ತಂದೆ, ಪ್ರೀತಿಗಾಗಿ ಮಗಳ ನಡುವೆ ಜಟಾಪಟಿ

ಬೆಳಗಾವಿ: ಪ್ರಿಯಕರನೊಂದಿಗೆ ಶಾಸ್ತ್ರೋಕ್ತವಾಗಿ ಮದುವೆ ಮಾಡುತ್ತೇನೆ ಮನೆಗೆ ಬಾ ಎಂದು ತಂದೆ ಕರೆದೊಯ್ಯುತ್ತಿದ್ದಾಗ ‘ಈಗಾಗಲೇ ತನಗೆ ವಿವಾಹವಾಗಿದೆ, ಪತಿಯೊಂದಿಗೆ ಬದುಕಲು ಬಿಡಿ’ ಎಂದು ಹಠ ಹಿಡಿದು ಯುವತಿ ರಂಪಾಟ ಮಾಡಿದ ಘಟನೆ ಮಂಗಳವಾರ ಮಾರ್ಕೇಟ್ ಪ್ರದೇಶದಲ್ಲಿ ಜರುಗಿದೆ.

ತಾಲೂಕಿನ ಬಿ.ಕೆ.ಕಂಗ್ರಾಳಿ ಗ್ರಾಮದ ಯುವಕ ಶಿವಂ ಶಿಂಧೆ ಮತ್ತು ಯಮಕನಮರಡಿಯ ಶೃತಿ (ಹೆಸರು ಬದಲಾಯಿಸಲಾಗಿದೆ) ಕಳೆದ ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದು, ಕಳೆದ ಬುಧವಾರವಷ್ಟೇ ವಿವಾಹವಾಗಿರುವುದಾಗಿ ಹೇಳಿಕೊಳ್ಳುತ್ತಿದ್ದಾರೆ. ಆದರೆ, ತಾನೊಬ್ಬ ಜನಪ್ರತಿನಿಧಿಯಾಗಿದ್ದು ಮಗಳ ಈ ವರ್ತನೆಯಿಂದ ತನ್ನ ಪ್ರತಿಷ್ಠೆ ಹಾಳಾಗುತ್ತದೆ. ತಾನೇ ಅದ್ದೂರಿಯಾಗಿ ಮದುವೆ ಮಾಡಿಸುವುದಾಗಿ ಹೇಳಿ ತಂದೆಯು ಮಗಳನ್ನು ಕರೆದೊಯ್ಯುತ್ತಿದ್ದಾಗ ಆಕೆ ಪತಿಗಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

ತಂದೆಯ ಜತೆಗೆ ತೆರಳಿದರೆ ಮನೆಯಲ್ಲಿ ತನ್ನ ಮೇಲೆ ಹಲ್ಲೆ ನಡೆಯುವ ಆತಂಕ ವ್ಯಕ್ತಪಡಿಸಿದ ಯುವತಿ ಪ್ರಿಯಕರನೊಂದಿಗೆ ಬದುಕಲು ಅವಕಾಶ ನೀಡಿ ಎಂದು ಪೊಲೀಸರ ಎದುರು ಹೇಳಿಕೆ ನೀಡಿದ್ದಾಳೆ. ಮಧ್ಯಾಹ್ನದಿಂದ ರಾತ್ರಿ 8ರವರೆಗೂ ಪ್ರೇಮಿಗಳು, ಯುವತಿಯ ಪಾಲಕರು ಠಾಣೆಯಲ್ಲಿದ್ದರು. ಈ ಸಂದರ್ಭದಲ್ಲಿ ಯುವತಿ ಪಾಲಕರು ರಾಜಕೀಯ ಬೆಂಬಲ ಬಳಸಿ ಮಗಳನ್ನು ಮನವರಿಕೆ ಮಾಡುವಂತೆ ಒತ್ತಡ ಹೇರಿದ್ದರು ಎನ್ನಲಾಗಿದೆ. ತಡರಾತ್ರಿವರೆಗೂ ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿರಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net