ಮೂವರು ಮಕ್ಕಳನ್ನು ಕೊಂದು ನೇಣಿಗೆ ಶರಣಾದ ತಂದೆ

Suicide
Published on

ಬೆಂಗಳೂರು: ತಂದೆಯೋರ್ವ ಮೂವರು ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಮೈಕೋ ಲೇಔಟ್​ನ ರಮಣಿಶ್ರೀ ಎಂಕ್ಲೇವ್ ಬಳಿ ನಡೆದಿದೆ.

ರಮಣಿಶ್ರೀ ಎಂಕ್ಲೇವ್​ನಲ್ಲಿ ಸೆಕ್ಯುರಿಟಿ ಗಾರ್ಡ್ ಅಗಿ ಕೆಲಸ ಮಾಡ್ತಿದ್ದ ಜನಕರಾಜ್ ಬಿಸ್ತಾ (32) ಮಕ್ಕಳಾದ ಸರಸ್ವತಿ (14 ), ಹೇಮಂತಿ (9) ಮತ್ತು ರಾಜಕುಮಾರ್ (3)ರನ್ನ ಕೊಂದು ತಾನು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ನಾಲ್ವರ ಮೃತ ದೇಹಗಳನ್ನು ವಿಕ್ಟೋರಿಯಾ ಅಸ್ಪತ್ರೆಗೆ ರವಾನೆ ಮಾಡಲಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಈ ಸಂಬಂಧ ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net