ಗಾಯಾಳು ಮಗಳನ್ನು ತಳ್ಳುವ ಗಾಡಿಯಲ್ಲಿ ಆಸ್ಪತ್ರೆಗೆ ಕರೆತಂದ ತಂದೆ; ಲಾಕ್​ಡೌನ್​ನಿಂದಾಗಿ ವಾಹನವೇ ಸಿಕ್ಕಿಲ್ಲ!

Cart 1
Published on

ಬೀದರ್​: ಲಾಕ್​ಡೌನ್​ ನಿರ್ಬಂಧವನ್ನೂ ಮೀರಿ ವಿನಾಕಾರಣ ವಾಹನಗಳ ಸಮೇತ ರಸ್ತೆಗಿಳಿಯುವವರು ಒಂದೆಡೆಯಾದರೆ, ಎಮರ್ಜೆನ್ಸಿ ಇದ್ದರೂ ಒಂದೇ ಒಂದು ವಾಹನ ಸಿಗದೆ ಪರದಾಡುವವರು ಮತ್ತೊಂದೆಡೆ. ಇಂಥದ್ದೊಂದು ಪರಿಸ್ಥಿತಿಯಲ್ಲಿ ವ್ಯಕ್ತಿಯೊಬ್ಬರು ತಮ್ಮ ಮಗಳನ್ನು ತಳ್ಳುವ ಗಾಡಿಯಲ್ಲಿ ಕೂರಿಸಿಕೊಂಡು ಆಸ್ಪತ್ರೆಗೆ ಕರೆದೊಯ್ಯುವಂತಾಗಿದೆ.

ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಇಂಥದ್ದೊಂದು ಸನ್ನಿವೇಶ ಕಂಡುಬಂದಿದೆ. ವ್ಯಕ್ತಿಯೊಬ್ಬರ ಮಗಳು ಬಿದ್ದು ಕಾಲಿಗೆ ಗಾಯವಾಗಿದ್ದು ನಡೆಯಲಾರದ ಪರಿಸ್ಥಿತಿ ಉಂಟಾಗಿದೆ. ಇಂಥ ಸಂದರ್ಭದಲ್ಲಿ ವಾಹನಗಳಿಗೆ ಹುಡುಕಾಡಿದರೂ ಒಂದೂ ಸಿಗದೆ ಕಡೆಗೆ ತಳ್ಳುಗಾಡಿಯ ಮೊರೆ ಹೋಗಿದ್ದಾರೆ.

ಮಗಳನ್ನು ತಳ್ಳುವ ಗಾಡಿ ಮೇಲೆ ಕೂರಿಸಿಕೊಂಡು ಈ ವ್ಯಕ್ತಿ ಬಸವಕಲ್ಯಾಣದ ತ್ರಿಪುರಾಂತದಿಂದ ಬಸವಕಲ್ಯಾಣ ತಾಲೂಕು ಆಸ್ಪತ್ರೆವರೆಗೆ ತಳ್ಳಿಕೊಂಡು ಬಂದಿದ್ದಾರೆ. ಲಾಕ್​ಡೌನ್​ನಿಂದಾಗಿ ಒಂದೂ ವಾಹನ ಸಿಗದ ಕಾರಣ ಮನೆಯಿಂದ ಇಲ್ಲಿಯವರೆಗೂ ಗಾಡಿ ತಳ್ಳಿಕೊಂಡೇ ಬರಬೇಕಾಯಿತು ಎಂದು ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net