ಪುತ್ರಿಯನ್ನೇ ಗರ್ಭಿಣಿಯಾಗಿಸಿದ ತಂದೆ ಸೆರೆ

Arrest
Published on

ಕಾಸರಗೋಡು: ಸ್ವತಃ ಪುತ್ರಿಯ ಮೇಲೆ ನಿರಂತರ ಲೈಂಗಿಕ ದೌರ್ಜನ್ಯವೆಸಗಿ ಗರ್ಭಿಣಿಯಾಗಿಸಿದ ತಂದೆಯನ್ನು ಹೊಸದುರ್ಗ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೊಡಗು ನಿವಾಸಿ ಹಾಗೂ ಹೊಸದುರ್ಗ ಕ್ವಾರ್ಟ್ರರ್ಸ್ ಒಂದರಲ್ಲಿ ವಾಸಿಸುತ್ತಿರುವ 45ರ ಹರೆಯದ ವ್ಯಕ್ತಿ ಬಂಧಿತ ಆರೋಪಿ.

ಕ್ವಾಟ್ರರ್ಸ್‌ನಲ್ಲಿ ಕೆಲವು ಸಮಯದಿಂದ ಪತ್ನಿ, ಮಕ್ಕಳೊಂದಿಗೆ ವಾಸಿಸುತ್ತಿದ್ದ. ಎಂಟನೇ ತರಗತಿಯಲ್ಲಿ ಕಲಿಯುತ್ತಿರುವ ಪುತ್ರಿಗೆ ಸೊಂಟನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಕೆಯನ್ನು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ದು ತಪಾಸಣೆಗೊಳಪಡಿಸಿದಾಗ ಬಾಲಕಿ ನಾಲ್ಕೂವರೇ ತಿಂಗಳ ಗರ್ಭಿಣಿಯೆಂದು ಬಹಿರಂಗಗೊಂಡಿತ್ತು. ಬಾಲಕಿ ನೀಡಿದ ವಾಹಿತಿಯನ್ವಯ ಈಕೆಯ ತಂದೆಯೇ ಕೃತ್ಯವೆಸಗಿರುವುದು ಬೆಳಕಿಗೆ ಬಂದಿತ್ತು. ಈ ಬಗ್ಗೆ ವೈದ್ಯರು ಹೊಸದುರ್ಗ ಠಾಣೆಗೆ ವಾಹಿತಿ ನೀಡಿದ್ದು, ಆರೋಪಿ ವಿದೇಶಕ್ಕೆ ಪರಾರಿಯಾಗುವ ಸಾಧ್ಯತೆ ಮನಗಂಡ ಪೊಲೀಸರು, ಆತ ವಾಸಿಸುತ್ತಿರುವ ಕ್ವಾಟ್ರರ್ಸ್‌ಗೆ ತೆರಳಿ ಪಾಸ್‌ಪೋರ್ಟ್ ವಶಕ್ಕೆ ಪಡೆದಿದ್ದರು. ಈ ವೇಳೆ ಆರೋಪಿ ಸ್ಕೂಟರಲ್ಲಿ ಪರಾರಿಯಾಗಿದ್ದು, ಸಿಸಿ ಕ್ಯಾಮರಾ ದೃಶ್ಯಾವಳಿ ಹಿನ್ನೆಲೆಯಲ್ಲಿ ಚೆರ್ಕಳವರೆಗೂ ಹಿಂಬಾಲಿಸಿದ್ದು, ನಂತರ ವಾಹಿತಿ ಲಭ್ಯವಾಗಿರಲಿಲ್ಲ. ಈ ಬಗ್ಗೆ ಸ್ಥಳೀಯರ ನೆರವು ಪಡೆದ ಪೊಲೀಸರು, ಶುಕ್ರವಾರ ಈತ ಕ್ವಾಟ್ರರ್ಸ್‌ಗೆ ಆಗಮಿಸುತ್ತಿದ್ದಂತೆ ನಾಗರಿಕರ ಸಹಾಯದಿಂದ ಈತನನ್ನು ಸೆರೆಹಿಡಿದಿದ್ದಾರೆ. ಪೋಕ್ಸೋ ಅನ್ವಯ ಈತನ ವಿರುದ್ಧ ಪ್ರಕರಣ ದಾಖಲಾಗಿದೆ. ತಾಯಿ ಮನೆಯಲ್ಲಿ ಇಲ್ಲದ ವೇಳೆ ಕಿರುಕುಳ ನೀಡಿರುವುದಾಗಿ ಬಾಲಕಿ ಪೊಲೀಸರಲ್ಲಿ ಹೇಳಿಕೆ ನೀಡಿದ್ದಳು. ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net