ಮೀನು ಹಿಡಿಯಲು ಹೋಗಿ ಪ್ರಾಣ ಕಳೆದುಕೊಂಡ ತಂದೆ-ಮಗ

People
ಘಟನೆ ನಡೆದ ಸ್ಥಳದಲ್ಲಿ ಜಮಾಯಿಸಿರು ಜನರು
Published on

ಕಲಬುರಗಿ: ಜಲಾಶಯವೊಂದರಲ್ಲಿ ಮೀನು ಹಿಡಿಯಲು ಹೋಗಿ ತಂದೆ-ಮಗ ಇಬ್ಬರೂ ಪ್ರಾಣ ಕಳೆದುಕೊಂಡ ದುರಂತವೊಂದು ನಡೆದುಹೋಗಿದೆ. ಕಲಬುರಗಿ ಜಿಲ್ಲೆಯಲ್ಲಿ ಇಂದು ಈ ದುರಂತ ಸಂಭವಿಸಿದೆ.

ಚಿಂಚೋಳಿ ತಾಲೂಕಿನ ಚಂದ್ರಂಪಳ್ಳಿ ನಿವಾಸಿಗರಾದ ತಂದೆ ರಾಜಪ್ಪ ತಿಮ್ಮಯ್ಯ ಮತ್ತು ಮಗ ಮಹೇಶ್ ಸಾವಿಗೀಡಾದವರು. ಇವರು ಚಂದ್ರಂಪಳ್ಳಿ ಜಲಾಶಯದಲ್ಲಿ ಮೀನು ಹಿಡಿಯಲು ಹೋಗಿದ್ದರು.

ಜಲಾಶಯದ ಆಳದಲ್ಲಿ ಸಿಲುಕಿದ ಇವರು ಮೇಲೆ ಬರಲಾಗದೆ ಮುಳುಗಿ ಸಾವಿಗೀಡಾಗಿದ್ದಾರೆ. ಮೃತದೇಹಗಳಿಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಶೋಧಕಾರ್ಯ ನಡೆಸುತ್ತಿದ್ದಾರೆ. ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net