ಕೆರೆಯಲ್ಲಿ ಮುಳುಗಿ ತಂದೆ- ಮಗ ಸಾವು

21 Dwd 3 (Gadigeppa and Ravi)
Published on

ಧಾರವಾಡ: ವಾಹನ ತೊಳೆಯಲು ಹೋಗಿದ್ದ ತಂದೆ- ಮಗ ಕಾಲು ಜಾರಿ ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ತಾಲೂಕಿನ ಕ್ಯಾರಕೊಪ್ಪ ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ. ಗದಿಗೆಪ್ಪ ಅಂಗಡಿ (45) ಹಾಗೂ ಅವರ ಮಗ ರವಿ ಅಂಗಡಿ (15) ಮೃತಪಟ್ಟವರು. ಇಬ್ಬರೂ ವಾಹನ ತೊಳೆಯಲು ಕೆರೆಗೆ ಹೋಗಿದ್ದರು. ಕಾಲು ಜಾರಿ ಬಿದ್ದು ಮುಳುಗುತ್ತಿದ್ದ ಪುತ್ರನನ್ನು ರಕ್ಷಿಸಲು ಹೋದ ತಂದೆ ಗದಿಗೆಪ್ಪನೂ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net