ಅತ್ತೆ, ಹೆಂಡತಿ ಮೇಲೆ ಮಾರಣಾಂತಿಕ ಹಲ್ಲೆ

Crime LOGO
Published on

ಮುಂಡಗೋಡ: ವ್ಯಕ್ತಿಯೋಬ್ಬ ತನ್ನ ಹೆಂಡತಿ ಹಾಗೂ ಅತ್ತೆಯ ಮೇಲೆ ಕುಡುಗೋಲಿ ನಿಂದ ಹಲ್ಲೆ ನಡೆಸಿ ತೀವ್ರ ಗಾಯಗೋಳಿಸಿದ ಘಟನೆ ತಾಲೂಕಿನ ಗೋಟಗೋಡಿಕೊಪ್ಪ ಗ್ರಾಮದಲ್ಲಿ ಗುರುವಾರ ಬೆಳಗ್ಗೆ ನಡೆದಿದೆ.

ಅನ್ನಪೂರ್ಣ ನಾಗರಾಜ ವಡಲಣ್ಣವರ, ಹಾಗೂ ಹೊನ್ನವ್ವಾ ಚಿನ್ನಳ್ಳಿ ಹಲ್ಲೆಗೊಳಗಾದವರು. ನಾಗರಾಜ ವಡಲಣ್ಣವರ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ.

ಆರೋಪಿ ನಾಗರಾಜ ಕಳೆದ ಹತ್ತು ವರ್ಷಗಳ ಹಿಂದೆ ಅನ್ನಪೂರ್ಣ ಎಂಬವಳನ್ನು ಮದುವೆಯಾಗಿದ್ದ ಆದರೆ ಕಳೆದ ಒಂದುತಿಂಗಳಿಂದ ಗಂಡ-ಹೆಂಡತಿಯ ಮಧ್ಯ ಜಗಳವುಂಟಾಗಿ ಅನ್ನಪೂರ್ಣ ಅದೇ ಗ್ರಾಮದಲ್ಲಿರುವ ತಾಯಿಯ ಮನೆಗೆ ಹೋಗಿ ಉಳಿದುಕೊಂಡಿದ್ದಳು.

ಗುರುವಾರ ಬೆಳಗ್ಗೆ ತಾಯಿ ಮಗಳು ಜೋತೆಯಾಗಿ ಹೊಲದ ಕೆಲಸಕ್ಕೆ ಹೋಗುತ್ತಿರುವಾಗ ಎದುರಿಗೆ ಬಂದ ನಾಗೇಶ ಕೈಯಲ್ಲಿದ್ದ ಕುಡುಗೋಲಿನಿಂದ ಪತ್ನಿ ಹಾಗೂ ಅತ್ತೆಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ.

ಸ್ಥಳಿಯರು ತಕ್ಷಣವೆ ತಾಲೂಕಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ,ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್​ಗೆ ದಾಖಲಿಸಿದ್ದಾರೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net