

ಚಿತ್ರದುರ್ಗ: ಜಿಲ್ಲಾಸ್ಪತ್ರೆ ಹಾಗೂ ಹೊಸದುರ್ಗ, ಹೊಳಲ್ಕೆರೆ ತಾಲೂಕು ಆಸ್ಪತ್ರೆಗಳಲ್ಲಿ ಫಾಸ್ಟ್‌ಟ್ರ್ಯಾಕ್ ಒಪಿಡಿ ರಿಜಿಸ್ಟ್ರೇಷನ್ ಸೌಲಭ್ಯ ಕಲ್ಪಿಸಲಾಗಿದೆ ಎಂದು ಡಿಎಚ್‌ಒ ಡಾ.ಆರ್.ರಂಗನಾಥ್ ಹೇಳಿದರು.
ಜಿಲ್ಲಾಸ್ಪತ್ರೆಯಲ್ಲಿ ಸೋಮವಾರ ಫಾಸ್ಟ್‌ಟ್ರ್ಯಾಕ್ ಒಪಿಡಿ ಸೌಲಭ್ಯ ವೀಕ್ಷಿಸಿ ಮಾತನಾಡಿ, ಶೀಘ್ರವೇ ಮೊಳಕಾಲ್ಮೂರು, ಹಿರಿಯೂರು ಹಾಗೂ ಚಳ್ಳಕೆರೆ ತಾಲೂಕು ಆಸ್ಪತ್ರೆಗಳಲ್ಲೂ ಆರಂಭಿಸಲಾಗುವುದು ಎಂದರು.
ಈ ವ್ಯವಸ್ಥೆಯಿಂದ ತುರ್ತಾಗಿ ಒಪಿಡಿ ಚೀಟಿ ಪಡೆಯಬಹುದು. ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಇ-ಹಾಸ್ಪಿಟಲ್ ಸಹಯೋಗದಲ್ಲಿ ಫಾಸ್ಟ್‌ಟ್ರ್ಯಾಕ್ ಒಪಿಡಿ ಸೌಲಭ್ಯ ಕಲ್ಪಿಸಲಾಗಿದೆ ಎಂದು ಹೇಳಿದರು.
ಇದರಿಂದ ಹೊರರೋಗಿ ವಿಭಾಗದ ಸೇವೆಗೆ ಸರದಿ ನಿಲ್ಲುವುದು ತಪ್ಪಲಿದೆ. ಫಾಸ್ಟ್‌ಟ್ರ್ಯಾಕ್ ಕೌಂಟರ್ ನಲ್ಲಿ ಕ್ಯೂಆರ್ ಕೋಡ್‌ನ್ನು ಮೊಬೈಲ್‌ನಲ್ಲಿ ಸ್ಕ್ಯಾನ್ ಮಾಡಿದರೆ ತಕ್ಷಣವೇ ಒಪಿಡಿ ಟೋಕನ್ ನಂಬರ್ ದೊರೆಯಲಿದೆ ಎಂದರು.
ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳ ಹೊರರೋಗಿಗಳ ವಿಭಾಗದಲ್ಲಿ ವೈದ್ಯಕೀಯ ತಪಾಸಣೆಗೆ ಚೀಟಿ ಪಡೆಯಲು ಸರದಿಯಲ್ಲಿ ಕಾಯಬೇಕಿತ್ತು. ತುರ್ತಾಗಿ ವೈದ್ಯರನ್ನು ಕಾಣಲು ಸಾಧ್ಯವಾಗುತ್ತಿರಲಿಲ್ಲ. ನೋಂದಣಿ ವೇಳೆ ರೋಗಿ ಹೆಸರು, ತಂದೆ ಹೆಸರು, ಲಿಂಗ, ವಯಸ್ಸು, ವಿಳಾಸ, ಮೊಬೈಲ್ ಸಂಖ್ಯೆ ಹೇಳಿದ ನಂತರ ಚೀಟಿ ಕೊಡಲಾಗುತ್ತಿತ್ತು. ಇದಕ್ಕಾಗಿ ಸಮಯ ಬೇಕಾಗಿತ್ತು. ಆದರೆ, ಈಗ ಫಾಸ್ಟ್‌ಟ್ರ್ಯಾಕ್ ಒಪಿಡಿಯಿಂದ ತ್ವರಿತವಾಗಿ ಟೋಕನ್ ಸಿಗಲಿದೆ. ಈ ಸೌಲಭ್ಯ ಕುರಿತು ಜಾಗೃತಿ ಮೂಡಿಸಬೇಕೆಂದು ಅಧಿಕಾರಿ, ಸಿಬ್ಬಂದಿಗೆ ಸೂಚಿಸಿದರು.
ಇ-ಆಸ್ಪತ್ರೆ ಜಿಲ್ಲಾ ಸಂಯೋಜಕ ತಿಪ್ಪೇಸ್ವಾಮಿ ಮಾತನಾಡಿ, ಇಕಾ ಕೇರ್ (ಉ ್ಚಚ್ಟಛಿ )/ಎಬಿಎಚ್‌ಎ ಆ್ಯಪ್ (ಅಆಏಅ ) ಡೌನ್‌ಲೋಡ್ ಮಾಡಿಕೊಂಡು, ಹೆಸರು, ಜನ್ಮದಿನಾಂಕ, ಲಿಂಗ, ವಿಳಾಸ ನಮೂದಿಸಿದರೆ ಎಬಿಎಚ್‌ಎ ಪ್ರೊಫೈಲ್ ಸಿದ್ಧವಾಗುತ್ತದೆ ಎಂದರು.
ಅದರಲ್ಲಿ ಕುಟುಂಬದ ಇತರ ಸದಸ್ಯರ ಹೆಸರು, ವಿವರ ನಮೂದಿಸಬಹುದು. ನಂತರ ವೈದ್ಯರಿಗೆ ತೋರಿಸಿಕೊಳ್ಳಬೇಕಾದ ದಿನ, ಫಾಸ್ಟ್‌ಟ್ರ್ಯಾಕ್ ಒಪಿಡಿ ಕೌಂಟರ್‌ನಲ್ಲಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಡಿಞರೆ ಟೋಕನ್ ನಂಬರ್ ದೊರೆಯುತ್ತದೆ ಎಂದು ತಿಳಿಸಿದರು.
ಕೌಂಟರ್‌ನಲ್ಲಿರುವ ನೌಕರ, ಟೋಕನ್ ನಂಬರ್ ಜತೆಗೆ ವಿಭಾಗ, ವೈದ್ಯರ ಹೆಸರು ನಮೂದಿಸಿ ಚೀಟಿ ಕೊಡುತ್ತಾರೆ. ಕೌಂಟರ್ ಬಳಿಯ ಪರದೆಯಲ್ಲಿ ರೋಗಿಯ ವಿವರ ಪ್ರದರ್ಶನವಾಗುತ್ತದೆ. ಕೌಂಟರ್‌ನಲ್ಲಿ ಕಂಪ್ಯೂಟರ್, ಪ್ರಿಂಟರ್ ಸೌಲಭ್ಯ ಇರಲಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಚ್.ಜೆ.ಬಸವರಾಜ್, ಇ-ಆಸ್ಪತ್ರೆ ಜಿಲ್ಲಾ ನೋಡಲ್ ಅಧಿಕಾರಿ ಡಾ.ಚಂದ್ರಶೇಖರ್ ಕಾಂಬ್ಳಿಮಠ್, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ, ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀಧರ್ ಇದ್ದರು.
(ಸಿಟಿಡಿ 13 ಕ್ಯೂರ್ ಕೋಡ್)
ಚಿತ್ರದುರ್ಗ ಜಿಲ್ಲಾಸ್ಪತ್ರೆ ಫಾಸ್ಟ್‌ಟ್ರ್ಯಾಕ್ ಒಪಿಡಿ ನೋಂದಣಿ ಸೌಲಭ್ಯವನ್ನು ಡಿಎಚ್‌ಒ ಡಾ.ರಂಗನಾಥ್ ಸೋಮವಾರ ವೀಕ್ಷಿಸಿದರು. ಡಾ.ಎಚ್.ಜೆ.ಬಸವರಾಜ್, ಎನ್.ಎಸ್.ಮಂಜುನಾಥ, ಡಾ.ಚಂದ್ರಶೇಖರ್ ಕಾಂಬ್ಳಿಮಠ್, ತಿಪ್ಪೇಸ್ವಾಮಿ, ಶ್ರೀಧರ್ ಇದ್ದರು.