ಫಾಸ್ಟ್ಯಾಗ್ ಉಚಿತ

Edit 4 Fastag
Published on

ಬೆಂಗಳೂರು: ಫಾಸ್ಟ್ಯಾಗ್ ಸ್ಟಿಕ್ಕರ್​ಗಳನ್ನು ಫೆ. 15ರಿಂದ 29ರವರೆಗೆ ಉಚಿತವಾಗಿ ವಿತರಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆದೇಶಿಸಿದೆ.

ಫಾಸ್ಟ್ಯಾಗ್ ಮೂಲಕ ಶುಲ್ಕ ಪಾವತಿ ಕಡ್ಡಾಯಗೊಳಿಸಿದ್ದರೂ ಈವರೆಗೆ ಶೇ. 100 ವಾಹನಗಳು ಫಾಸ್ಟ್ಯಾಗ್ ಖರೀದಿ ಮಾಡಿಲ್ಲದ ಕಾರಣ ವಾಹನ ಮಾಲೀಕ ರನ್ನು ಉತ್ತೇಜಿಸಲು ಪ್ರಾಧಿಕಾರ ಉಚಿತವಾಗಿ ಫಾಸ್ಟ್ಯಾಗ್ ಸ್ಟಿಕ್ಕರ್ ವಿತರಿಸಲು ಆದೇಶಿಸಿದೆ. ಈ ಆದೇಶದಂತೆ ಟೋಲ್ ಪ್ಲಾಜಾ, 22 ಬ್ಯಾಂಕ್​ಗಳಲ್ಲಿ ಪ್ರಕ್ರಿಯೆ ಶುಲ್ಕ ಮತ್ತು ಭದ್ರತಾ ಠೇವಣಿಯಿಲ್ಲದೆ ಫಾಸ್ಟಾ್ಯಗ್ ವಿತರಿಸಲಾಗುತ್ತದೆ. ಅದಕ್ಕೆ ಸಂಬಂಧಿಸಿದ ಹಣವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನೀಡಲಿದೆ. ಆದರೆ, ಫಾಸ್ಟ್ಯಾಗ್ ಸ್ಟಿಕ್ಕರ್ ಪಡೆಯುವಾಗ ಕನಿಷ್ಠ 100 ರೂಪಾಯಿ ರೀಜಾರ್ಜ್ ಮಾಡಿಸುವುದನ್ನು ಕಡ್ಡಾಯ.

ಸದ್ಯ ಫಾಸ್ಟ್ಯಾಗ್ ಖರೀದಿಗೆ 100ರಿಂದ 200 ರೂಪಾಯಿ ಪ್ರಕ್ರಿಯೆ ಶುಲ್ಕ ಮತ್ತು 200 ರೂಪಾಯಿ ಭದ್ರತಾ ಠೇವಣಿ ಪಾವತಿಸಬೇಕಿತ್ತು. ಜತೆಗೆ ಟ್ಯಾಗ್ ಸಕ್ರಿಯಗೊಳಿಸಲು ವಾಲೆಟ್ ರಚಿಸಿ 100 ರೂಪಾಯಿ ರೀಚಾರ್ಜ್ ಮಾಡಬೇಕಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net