ಫಾಸ್ಟ್ ಟ್ಯಾಗ್ ಇಲ್ಲದೆ ಟೋಲ್ ಗೇಟ್ ನಲ್ಲಿ ಕಾದು ನಿಂತ ಬಸ್ ವಿದ್ಯಾರ್ಥಿಗಳಿಗೆ ತೊಂದರೆ

Bus (1)
Published on

ಕಾರವಾರ: ಫಾಸ್ಟ್ ಟ್ಯಾಗ್ ಇಲ್ಲದೇ ಹೊರಟ ಬಸ್ ಟೋಲ್ ಗೇಟ್ ದಾಟಲಾಗದೆ ಕಾದು ನಿಂತ ಘಟನೆ ಶನಿವಾರ ನಡೆಯಿತು. ಇದರಿಂದ ಪಿಯುಸಿ ವಿದ್ಯಾರ್ಥಿಗಳು ತೊಂದರೆ ಅನುಭವಿಸಿದರು. ಕಾರವಾರ ಅಂಕೋಲಾ ಹುಬ್ಬಳ್ಳಿ ಬಾಗಲಕೋಟೆ ಬಸ್ ಎನ್ಡಬ್ಲ್ಯುಕೆಆರ್ ಟಿಸಿ ಬಸ್ ಬೆಳಗ್ಗೆ 7.45 ಕ್ಕೆ ಕಾರವಾರ ನಿಲ್ದಾಣ ಬಿಟ್ಟಿತ್ತು. ಆದರೆ, ಬಸ್ ಮುಂದಿನ ಗ್ಲಾಸ್ ಗೆ ಫಾಸ್ಟ್ ಟ್ಯಾಗ್ ಇರಲಿಲ್ಲ. ಅರ್ಧ ದಾರಿಗೆ ಬಂದ ನಂತರ ಡ್ರೈವರ್ ಅದನ್ನು ಗಮನಿಸಿದ್ದರು. ಬಸ್ ಚಲಾವಣೆ ಮಾಡುತ್ತಲೇ ಮೊಬೈಲ್ ಕರೆ ಮಾಡಿ ಡಿಪೋಕ್ಕೆ ಹೇಳಿದ್ದರು. ಅಂಕೋಲಾ ಡಿಪೋದಿಂದ ಮತ್ತೊಂದು ಬಸ್ ಮೂಲಕ ಫಾಸ್ಟ್ಯಾಗ್ ಕಳಿಸಿ ಕೊಟ್ಟಿದ್ದರೂ ಅದು ತಲುಪುವ ಹೊತ್ತಿಗೆ ವಿಳಂಬವಾಗಿತ್ತು.

ಅವರ್ಸಾ ಮುಂತಾದೆಡೆಯಿಂದ ಹೊರಟ 10 ರಷ್ಟು ವಿದ್ಯಾರ್ಥಿಗಳು   ಅಂಕೋಲಾಕ್ಕೆ ತೆರಳುವವರಿದ್ದರು.

ಪರೀಕ್ಷೆಗೆ ತೆರಳುವ ವಿದ್ಯಾರ್ಥಿಗಳು ಖಾಸಗಿ ಬಸ್ ಹತ್ತಿ ತೆರಳಬೇಕಾಯಿತು. ಕಚೇರಿಗಳಿಗೆ ತೆರಳುವವರು ವಿಳಂಬವಾಗಿ ಸಮಸ್ಯೆ ಅನುಭವಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net