ಮೈಸೂರಿನಲ್ಲಿ ಶೀಘ್ರ ಫೆರಿಫೆಲ್ ರಿಂಗ್ ರಸ್ತೆ: ಪ್ರತಾಪ್ ಸಿಂಹ

Road
Published on

ಹೊರ ವರ್ತುಲ ರಸ್ತೆ ನಿರ್ಮಾಣಕ್ಕೆ ನಮ್ಮ ಸರ್ಕಾರವಿದ್ದಾಗಲೇ 10 ಕೋಟಿ ರೂ. ಅನುದಾನ ಕೊಡಿಸಲಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳಸ್ತವಾಡಿ ಬಳಿ ಔಟರ್ ಫೆರಿಫೆಲ್ ರಿಂಗ್ ರಸ್ತೆ ಆರಂಭವಾಗುತ್ತದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚಿಸಲು ಅಧಿಕಾರಿಗಳ ಸಭೆ ಕರೆಯಲಾಗಿದೆ. ಇದರಿಂದ ಊಟಿ, ತಿ.ನರಸೀಪುರ, ನಂಜನಗೂಡು, ಬಂಡೀಪುರ ಕಡೆ ಹೋಗುವವರು ಮೈಸೂರಿಗೆ ಬಾರದಂತಾಗುತ್ತದೆ ಎಂದರು.

ಮೈಸೂರು ಇನ್ನು ಮುಂದೆ ರಿಂಗ್ ರಸ್ತೆ ಆಚೆ, ಹೊರ ವರ್ತುಲ ರಸ್ತೆ ಒಳಗೆ ಬೆಳವಣಿಗೆಯಾಗಲಿದೆ. ಕೈಗಾರಿಕೆಗಳು ಆ ಭಾಗದಲ್ಲಿಯೇ ಬರುತ್ತವೆ. ನಮ್ಮ ನಗರದ ಮೂಲ ಸ್ವರೂಪ ಹಾಗೂ ಪಾರಂಪರಿಕತೆಯನ್ನು ಹಾಗೆಯೇ ಉಳಿಸಿಕೊಳ್ಳಲಾಗುವುದು. ಮೂಲತನವನ್ನು ಉಳಿಸಿಕೊಂಡು ಅಭಿವೃದ್ಧಿ ಮಾಡಲಾಗುವುದು ಎಂದರು.

ಗುತ್ತಿಗೆದಾರರಿಗೆ ನೀಡಬೇಕಿದ್ದ 6 ಕೋಟಿ ರೂ. ಬಾಕಿ ನೀಡದ ಹಿನ್ನೆಲೆಯಲ್ಲಿ ಅಂತಿಮ ಹಂತದ ಕಾಮಗಾರಿ ಪೂರ್ಣಗೊಳ್ಳದೆ ಕತ್ತಲಲ್ಲಿದ್ದ ರಿಂಗ್ ರಸ್ತೆಗೆ ಮತ್ತೆ ಬೆಳಕು ದೊರೆತಿದೆ. ಮುಡಾ ವತಿಯಿಂದ ಬಾಕಿ ಹಣವನ್ನು ನೀಡಲಾಗಿದೆ. ಹೀಗಾಗಿ ಸಮಸ್ಯೆ ಬಗೆಹರಿದಿದ್ದು ಇನ್ನು ಮುಂದೆ ನಿರಂತರವಾಗಿ ರಿಂಗ್ ರಸ್ತೆಯಲ್ಲಿ ಬೆಳಕು ಬರಲಿದೆ ಎಂದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಯೋಜನೆಯ ಭೂ ಸ್ವಾಧೀನ ಅಧಿಕಾರಿ ಹರ್ಷವರ್ಧನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net