ದಸರಾ, ದೀಪಾವಳಿ ಜುವೆಲ್ಲರಿ ಮತ್ತು ಲೈಫ್​ಸ್ಟೈಲ್ ಮೇಳ; ಫ್ಯಾಶನ್ ಸ್ಟೋರ್ ಎಕ್ಸಿಬಿಷನ್ಸ್ ಆಯೋಜನೆ

Mela
Published on

ಬೆಂಗಳೂರು: ಫ್ಯಾಶನ್ ಸ್ಟೋರ್ ಎಕ್ಸಿಬಿಷನ್ಸ್ ಸಂಸ್ಥೆಯು ದಸರಾ ಮತ್ತು ದೀಪಾವಳಿದ ವಿಶೇಷ ಮೂರು ದಿನಗಳ ಭಾರತೀಯ ಆಭರಣ ಮತ್ತು ಲೈಫ್‌ಸ್ಟೈಲ್ ಮೇಳವನ್ನು ಆಯೋಜಿಸಿದೆ.

ಸೆ. 27, 28 ಮತ್ತು 29ರಂದು ಬೆಂಗಳೂರಿನ ಅರಮನೆ ಮೈದಾನದ ಪ್ರತಿಷ್ಠಿತ ಕಿಂಗ್ಸ್ ಕೋರ್ಟ್, ಗೇಟ್ ನಂ. 5 ರಲ್ಲಿ ಪ್ರದರ್ಶನ ಆಯೋಜಿಸಲಾಗಿದ್ದು, ಬೆಳಗ್ಗೆ 8 ರಿಂದ ರಾತ್ರಿ 10ರವರೆಗೆ ತೆರೆದಿರುತ್ತದೆ. ಪ್ರತಿದಿನ ಮೂವರು ಅದೃಷ್ಟವಂತ ಗ್ರಾಹಕರನ್ನು ಲಕ್ಕಿಡಿಪ್ ಮೂಲಕ ಆಯ್ಕೆ ಮಾಡಿ ಬಹುಮಾನ ನೀಡಲಾಗುತ್ತದೆ.

ಸೆ.27ರಿಂದ ಆರಂಭವಾಗುವ ಮೂರು ದಿನಗಳ ಪ್ರದರ್ಶನ ಮತ್ತು ಮಾರಾಟ ಮೇಳದ ಕುರಿತು ಶುಕ್ರವಾರ ಬ್ರೀಗೇಡ್ ಟವರ್ ಸಭಾಂಗಣದಲ್ಲಿ ಆಯೋಜಿಸಿದ್ದ ಮಾಧ್ಯಮಗೋಷ್ಠಿಯಲ್ಲಿ ಚಿತ್ರನಟಿ ಶರಣ್ಯ ಶೆಟ್ಟಿ ಬ್ರೋಚರ್ ಬಿಡುಗಡೆಗೊಳಿಸಿದರು.

ಈ ವೇಳೆ ಮಾತನಾಡಿದ ಮೇಳದ ಆಯೋಜಕ ರವಿ ಅರೋರ, ಫ್ಯಾಷನ್ ಸ್ಟೋರ್ ಎಕ್ಸಿಬಿಷನ್ಸ್ ಬಹು ನಿರೀಕ್ಷಿತ ಭಾರತೀಯ ಆಭರಣ ಮತ್ತು ಜೀವನಶೈಲಿ ಪ್ರದರ್ಶನವನ್ನು ದಸರಾ ಮತ್ತು ದೀಪಾವಳಿ ಹಬ್ಬದ ಸಂಭ್ರಮವನ್ನು ಹೆಚ್ಚಿಸುವುದಕ್ಕಾಗಿ ಆಯೋಜಿಸಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಎ.7 ಎಂಟರ್‌ಟೈನ್‌ಮೆಂಟ್ ಮಾಲೀಕ ಅಜಯ್ ಪ್ರತಾಪ್ ಸಿಂಗ್, ಡಿಸೈನರ್ ಮೇಘ ಅರೋರ ಮತ್ತಿತರರು ಉಪಸ್ಥಿತರಿದ್ದರು.

ಭಾರತೀಯ ಆಭರಣ ಮತ್ತು ಜೀವನಶೈಲಿ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ 100 ಕ್ಕೂ ಹೆಚ್ಚು ಪ್ರಸಿದ್ಧ ಬ್ರ್ಯಾಂಡ್‌ಗಳು ಒಂದೇ ಸೂರಿನಲ್ಲಿ ಸಿಗಲಿವೆ. ಆಭರಣಗಳು ಮತ್ತು ಗೃಹಾಲಂಕಾರ ವಸ್ತುಗಳು, ಅಂದವಾದ ಕರಕುಶಲ ಆಭರಣಗಳು ಮತ್ತು ವಿನ್ಯಾಸಕ ಉಡುಗೆಗಳು ಗ್ರಾಹಕರ ಮೆಚ್ಚುಗೆ ಮತ್ತು ಖರೀದಿಗೆ ಲಭ್ಯವಾಗಲಿವೆ.

ಬೆಂಗಳೂರಿನ ಸಾವಿರಾರು ಫ್ಯಾಷನ್-ಫಾರ್ವರ್ಡ್ ವ್ಯಕ್ತಿಗಳು, ವಧು-ವರರು, ಹಬ್ಬದ ಖರೀದಿದಾರರು ಮತ್ತು ಜೀವನಶೈಲಿಯ ಉತ್ಸಾಹಿಗಳನ್ನು ಈ ಮೇಳ ಸೆಳೆಯುವ ನಿರೀಕ್ಷೆಯಿದೆ.

ಫ್ಯಾಷನ್ ಸ್ಟೋರ್ ಎಕ್ಸಿಬಿಷನ್ಸ್

2012 ರಲ್ಲಿ ಸ್ಥಾಪನೆಯಾದ ಫ್ಯಾಷನ್ ಸ್ಟೋರ್ ಎಕ್ಸಿಬಿಷನ್ಸ್ ದಕ್ಷಿಣ ಭಾರತದಾದ್ಯಂತ ಈವರೆಗೆ ನೂರಕ್ಕೂ ಹೆಚ್ಚು ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಯಶಸ್ವಿಯಾಗಿ ನಡೆಸಿದೆ. ಈವೆಂಟ್ ಮ್ಯಾನೇಜ್‌ಮೆಂಟ್‌ನಲ್ಲಿ ಪ್ರಮುಖ ಹೆಸರಾಗಿರುವ ಸಂಸ್ಥೆಯು ಆಭರಣ ಮತ್ತು ಜೀವನಶೈಲಿ ಪ್ರದರ್ಶನಗಳಲ್ಲಿ ಪರಿಣತಿ ಹೊಂದಿರುವ ಉನ್ನತ ಬ್ರ್ಯಾಂಡ್‌ಗಳನ್ನು ಒಟ್ಟುಗೂಡಿಸುವ ವಿಶೇಷ ಶಾಪಿಂಗ್ ಅನುಭವವನ್ನು ಹೊಂದಿದೆ.

"ಫ್ಯಾಷನ್ಸ್ ಸ್ಟೋರ್ಸ್‌ ಆಯೋಜಿಸಿರುವ ಮೇಳದಲ್ಲಿ ಆಭರಣ, ಬಟ್ಟೆ ಇನ್ನಿತರೆ ಗೃಹಪಯೋಗಿ ವಸ್ತುಗಳೆಲ್ಲವು ಒಂದೇ ಸೂರಿನಡಿ ರಿಯಾಯಿತಿ ದರದಲ್ಲಿ ದೊರೆಯಲಿವೆ. ಪ್ರವೇಶ ಉಚಿತವಾಗಿದ್ದು, ದಸರಾ, ದೀಪಾವಳಿ ಹಬ್ಬದ ಖರೀದಿಗಾಗಿ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು, ನಿಮಗೆ ಇಷ್ಟವಾದ ವಸ್ತುಗಳನ್ನು ಖರೀದಿ ಮಾಡಬಹುದು." -ಶರಣ್ಯ ಶೆಟ್ಟಿ, ಚಿತ್ರನಟಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net