ಮೈಸೂರಿನಲ್ಲಿ ಜೂನ್ 2ರಂದು ಫ್ಯಾಷನ್ ಶೋ

h29-fashion show
Published on

ಮೈಸೂರು: ‘ಮಾಡೆಲ್ ಆಫ್ ದಿ ಇಯರ್-2024’ ಫ್ಯಾಷನ್ ಶೋ ಕಾರ್ಯಕ್ರಮವನ್ನು ಜೂನ್ 2 ರಂದು ಸಂಜೆ 4ಕ್ಕೆ ನಗರದ ಮಹದೇವಪುರ ಮುಖ್ಯರಸ್ತೆಯಲ್ಲಿರುವ ಗ್ರೀನ್ ಫಿಂಚ್ ರೆಸಾರ್ಟ್‌ನಲ್ಲಿ ಆಯೋಜಿಸಲಾಗಿದೆ.


ಫ್ಯಾಷನ್ ಶೋ ಎಂದರೆ ಸೆಲೆಬ್ರಿಟಿಗಳಿಗೆ ಮಾತ್ರ ಸೀಮಿತವಲ್ಲ, ಸಾಮಾನ್ಯರೂ ಅವಕಾಶ ಕಲ್ಪಿಸಬೇಕು. ಈ ಆಶಯದಡಿ ಸಾಮಾನ್ಯ ಜನರಿಗಾಗಿ ಫ್ಯಾಷನ್ ಶೋ ಆಯೋಜಿಸಲಾಗಿದೆ. ಇದರಲ್ಲಿ ಖ್ಯಾತ ರೂಪದರ್ಶಿಗಳು ತೀರ್ಪುಗಾರರಾಗಿ ಪಾಲ್ಗೊಳ್ಳುತ್ತಿದ್ದಾರೆ.


ಪಾರಂಪರಿಕ, ಪಾಶ್ಚಾತ್ಯ ಉಡುಗೆ, ಪ್ರಶ್ನೋತ್ತರ ಮೊದಲಾದ ಸುತ್ತುಗಳಲ್ಲಿ ಸ್ಪರ್ಧೆ ನಡೆಯಲಿದೆ. ವಿಜೇತರಿಗೆ ಟ್ರೋಫಿ, ಪ್ರಮಾಣಪತ್ರ ನೀಡಲಾಗುವುದು.
ಮಾಹಿತಿಗಾಗಿ ದೂ.96866 67867ಸಂಪರ್ಕಿಸಬಹುದು ಎಂದು ಸಂಚಾಲಕ ವಿಜಯಕುಮಾರ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಸಯ್ಯದ್ ಇಸ್ಮಾಯಿಲ್. ಮಿರ್ಜಾ ಅಲಿ, ಶಹಬಾದ್ ಖಾನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net