ಮೈಸೂರಿನಲ್ಲಿ ಮನಸೂರೆಗೊಂಡ ಫ್ಯಾಷನ್ ಶೋ

35
Published on

ಮೈಸೂರು: ‘ಶುಭಾರಾಣಿ ಫ್ಯಾಷನ್ ತಂಡ’ದಿಂದ ದಸರಾ ವಸ್ತುಪ್ರದರ್ಶನದ ಆವರಣದಲ್ಲಿ ಆಯೋಜಿಸಿದ್ದ ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಫ್ಯಾಷನ್ ಶೋ ಮನಸೂರೆಗೊಂಡಿತು. ಸರ್ಕಾರಿ ಶಾಲೆಯ ಮಕ್ಕಳು ಈ ಫ್ಯಾಷನ್ ಶೋನಲ್ಲಿ ಭಾಗವಹಿಸಿದ್ದಲ್ಲದೇ ಕೆಲವರು ವಿಕಲಚೇತನರು ತಮ್ಮ ಪ್ರತಿಭೆ ಪ್ರದರ್ಶಿಸಿದ್ದು ವಿಶೇಷವಾಗಿತ್ತು.
ವಸ್ತುಪ್ರದರ್ಶನದ ಆವರಣದಲ್ಲಿರುವ ಪಿ.ಕಾಳಿಂಗರಾವ್ ಸಭಾಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ಫ್ಯಾಷನ್ ಶೋಗೆ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಸಿಇಒ ರಾಜೇಶ್ ಜಿ.ಗೌಡ ಚಾಲನೆ ನೀಡಿ ಶುಭ ಕೋರಿದರು.
ರೂಪದರ್ಶಿ ತನಿಷ್ಕಾ ಮೂರ್ತಿ ಮಾತನಾಡಿ, ಭಾರತೀಯ ಸಂಸ್ಕೃತಿ, ಪರಂಪರೆಯನ್ನು ಪರಿಚಯಿಸುವ ಉದ್ದೇಶದಿಂದ ಈ ಫ್ಯಾಷನ್ ಶೋ ಆಯೋಜಿಸಲಾಗಿದೆ. ಈ ಫ್ಯಾಷನ್ ಶೋನಲ್ಲಿ ದೇಶದ ವಿವಿಧ ಭಾಗದ ಉಡುಗೆ, ತೊಡುಗೆ ಜತೆಗೆ, ನಮ್ಮ ರಾಜ್ಯದ ವಿವಿಧ ಭಾಗದ ಸಂಸ್ಕೃತಿಯನ್ನು ಪರಿಚಯಿಸಲಾಗುತ್ತಿದೆ ಎಂದು ಹೇಳಿದರು.
ರೂಪದರ್ಶಿ ಶ್ರೇಯಸ್, ಆಯೋಜಕರಾದ ಶುಭಾರಾಣಿ, ಮೌಲ್ವಿಕಾ ಇದ್ದರು. ಬಳಿಕ ತನಿಷ್ಕಮೂರ್ತಿ, ಶ್ರೇಯಸ್ ಅವರ ಫ್ಯಾಷನ್ ವಾಕ್, ಶಾಸ್ತ್ರೀಯ ನೃತ್ಯ, ಭರತ ನಾಟ್ಯ, ಸೀರೆ ವಾಕ್, ಪಾಶ್ಚಿಮಾತ್ಯ ನೃತ್ಯ, ಮಕ್ಕಳ ಸ್ಪೋರ್ಟ್ಸ್ ಥೀಮ್ ಫ್ಯಾಷನ್ ವಾಕ್, ಸೋಲೋ ನೃತ್ಯ, ಕೊಡಗಿನ ನೃತ್ಯ, ಫ್ಯಾಷನ್ ರೌಂಡ್ ಇನ್ನಿತರ ಕಾರ್ಯಕ್ರಮ ಗಮನ ಸೆಳೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net