ಹುಬ್ಬಳ್ಳಿ: ಇಲ್ಲಿಯ ಸ್ವರ್ಣ ಮಯೂರಿ ಸಾಂಸ್ಕೃತಿಕ ಸಂಸ್ಥೆ ವತಿಯಿಂದ ಜೂನ್ 2ರಂದು ದೇಶಪಾಂಡೆನಗರದ ಸವಾಯಿ ಗಂಧರ್ವ ಕಲಾ ಮಂದಿರದಲ್ಲಿ ಮಿಸ್ಟರ್ ಹಾಗೂ ಮಿಸ್ ಕರ್ನಾಟಕ ಜೂನಿಯರ್& 2024 ಮಕ್ಕಳ ಫ್ಯಾಷನ್ ಶೋ ಅಂತಿಮ ಹಂತದ ಸ್ಪರ್ಧೆಗಳು ಜರುಗಲಿವೆ.
ವಿವಿಧ ಕಡೆಯಿಂದ ಭಾಗವಹಿಸಿದ್ದ ಸುಮಾರು 250ಕ್ಕೂ ಹೆಚ್ಚು ಮಕ್ಕಳಲ್ಲಿ 97 ಮಕ್ಕಳು ಅಂತಿಮ ಹಂತದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಮಧ್ಯಾಹ್ನ 3ಕ್ಕೆ ಅಂತಿಮ ಹಂತದ ಸ್ಪರ್ಧೆಗಳು ನಡೆಯಲಿವೆ.
ಸಂಜೆ 7.15ಕ್ಕೆ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಉದ್ಘಾಟಿಸುವರು. ಶಾಸಕ ಮಹೇಶ ಟೆಂಗಿನಕಾಯಿ ಅಧ್ಯಕ್ಷತೆ ವಹಿಸುವರು ಎಂದು ಸ್ವರ್ಣ ಮಯೂರಿ ಸಂಸ್ಥೆ ಅಧ್ಯಕ್ಷ ಚನ್ನಯ್ಯ ವಸ್ತ್ರದ ತಿಳಿಸಿದ್ದಾರೆ.