ಮೈಸೂರಿನಲ್ಲಿ ಬಸವ ಜಯಂತಿಯ ಆಕರ್ಷಕ ಮೆರವಣಿಗೆ

9
Published on

ಮೈಸೂರು: ಬಸವ ಜಯಂತಿ ಅಂಗವಾಗಿ ನಗರದ ಜೆಎಸ್‌ಎಸ್ ಮಹಾವಿದ್ಯಾಪೀಠದ ಮುಂಭಾಗದ ಬಸವೇಶ್ವರ ಪ್ರತಿಮೆಯಿಂದ ಮಹಾರಾಜ ಕಾಲೇಜು ಮೈದಾನದ ವರೆಗೆ ಆಕರ್ಷಕ ಮೆರವಣಿಗೆ ನಡೆಯಿತು.
108 ಕಳಸ ಹೊತ್ತ ಮಹಿಳೆಯರು, ಶಾಲಾ ಮಕ್ಕಳು ಹಾಗೂ ಮಹಿಳೆಯರಿಂದ ವಚನ ಗಾಯನ ನಡಿಗೆ, ನಂದಿ ಧ್ವಜ ಕುಣಿತ, ವೀರಗಾಸೆ, ಮರಗಾಲು ಕುಣಿತ, ಕೀಲು ಕುದುರೆ ಕುಣಿತ, ಗಾಡಿಗೊಂಬೆ, ಹುಲಿ ವೇಷ, ಕಂಸಾಳೆ ಕುಣಿತ, ಡೊಳ್ಳು ಕುಣಿತ, ಪೂಜಾ ಕುಣಿತ, ಪಟ್ಟದ ಕುಣಿತ, ಗೊರವರ ಕುಣಿತಗಳು ನೆರೆದಿದ್ದ ಜನರನ್ನು ಆಕರ್ಷಿಸಿದವು.
ಬೆಳ್ಳಿ ರಥದಲ್ಲಿ ಅಕ್ಕಮಹಾದೇವಿ, ಅಲ್ಲಮ ಪ್ರಭು, ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಸೇರಿದಂತೆ ಇತರರ ವೇದಧಾರಿ ಮಕ್ಕಳು ಗಮನ ಸೆಳೆದರು. ಅಶ್ವರೂಢರಾಗಿದ್ದ ಬಾಲ ಬಸವಣ್ಣನವರು ರಸ್ತೆೆಯುದ್ದಕ್ಕೂ ಸಾರ್ವಜನಿಕರತ್ತ ಕೈ ಬೀಸಿ ಮುನ್ನಡೆದರೆ, ಅನುಭವ ಮಂಟಪ, ಸಿದ್ಧಗಂಗಾ ಶ್ರೀ, ಸಿದ್ದೇಶ್ವರ ಸ್ವಾಮೀಜಿ, ದೇವನೂರು ಮಠದ ಗುರುಮಲ್ಲೇಶ್ವರರು, ಸುತ್ತೂರು ಮಠದ ಪರಂಪರೆ, ಅಖಿಲಭಾರತ ವೀರಶೈವ ಮಹಾಸಭಾ ನಡೆದು ಬಂದ ದಾರಿಯನ್ನು ತಿಳಿಸುವ ಸ್ತಬ್ಧ ಚಿತ್ರಗಳು ಮರೆವಣಿಗೆಯಲ್ಲಿ ಸಾಗಿದವು. ನೊಣವಿನಕೆರೆಯ ಮಠದ ಆನೆಯ ಮೇಲೆ ಅಂಬಾರಿಯಲ್ಲಿ ಬಸವಣ್ಣನ ಪ್ರತಿಮೆ ಇಟ್ಟು ಮೆರವಣಿಗೆ ನಡೆಸಲಾಯಿತು.
ಮೆರವಣಿಗೆ ಅಂಗವಾಗಿ ಮೊದಲಿಗೆ ದೇವನೂರು ಮಠದ ಶ್ರೀಮಹಾಂತ ಸ್ವಾಮೀಜಿ ಧ್ವಜಾರೋಹಣ ನೆರವೇರಿಸಿದರು. ಗುಂಡ್ಲುಪೇಟೆ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಮೆರವಣಿಗೆ ಉದ್ಘಾಾಟಿಸಿದರು. ವಾಟಾಳು ಮಠದ ಡಾ.ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಹೊಸಮಠದ ಚಿದಾನಂದ ಸ್ವಾಮೀಜಿ, ಕುದೇರು ಮಠದ ಗುರುಶಾಂತಸ್ವಾಮೀಜಿ, ಕುಂದೂರು ಮಠದ ಶರತ್‌ಚಂದ್ರ ಸ್ವಾಾಮೀಜಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net