

ಸೊರಬ: ಚಂದ್ರಗುತ್ತಿ ಹೋಬಳಿ ತೋರಗೊಂಡನಕೊಪ್ಪ (ಶಿವಪುರ) ಗ್ರಾಮದ ಶ್ರೀ ಚೌಡೇಶ್ವರಿ ದೇವಿ ವಾರ್ಷಿಕೋತ್ಸವ ಅಂಗವಾಗಿ ಶುಕ್ರವಾರ ಶ್ರೀ ಚೌಡೇಶ್ವರಿ ಬಯಲಾಟ ಮಂಡಳಿ ಕಲಾವಿದರು ಶ್ರೀ ಶನೈಶ್ಚರ ಮಹಾತ್ಮೆ ಅರ್ಥಾತ್ ರಾಜಾ ವಿಕ್ರಮ ಚರಿತ್ರೆ ಎಂಬ ಭಕ್ತಿ ಪ್ರಧಾನ ಕಥೆ ಪ್ರದರ್ಶಿಸಿದರು.
ಮನೋಹರ ಶೇಟ್, ರತ್ನಾಕರ ಶೇಟ್, ವಿಠ್ಠಲ್ ಶೇಟ್, ನಾಗರಾಜ್ ನಾಮಧಾರಿ ಭಾಗವತಿಕೆಯಲ್ಲಿ ಕಥೆ ಪ್ರದರ್ಶನಗೊಂಡು ಎಲ್ಲರ ಮೆಚ್ಚುಗೆ ಗಳಿಸಿತು. ಗ್ರಾಮೀಣ ಭಾಗಗಳಲ್ಲಿ ಸ್ಥಳೀಯ ಕಲಾವಿದರು ಬಯಲಾಟ, ಯಕ್ಷಗಾನ, ಭಕ್ತಿ ಪ್ರಧಾನ ಕಥೆ, ಸಾಮಾಜಿಕ ನಾಟಕ, ಪೌರಾಣಿಕ ಜನಪದ ಕಲೆಗಳನ್ನು ಅಭಿನಯಿಸುವುದು ಮುಂದಿನ ಪೀಳಿಗೆಗೆ ಪ್ರೇರಣೆಯಾಗಿದೆ ಎಂದು ಗ್ರಾಮಸ್ಥರು ತಿಳಿಸಿದರು.
ಪಾತ್ರಧಾರಿಗಳಾಗಿ ಎನ್.ಜಗದೀಶ್, ಎಚ್.ದಿನೇಶ್, ಸಂತೋಷ್ ಶೇಟ್, ಕೆ.ಕಿಶೋರ್, ಪ್ರವೀಣ್ ಆರ್.ಶೇಟ್, ಎಂ.ಟಿ.ಆಕಾಶ್, ಕೆ.ರವಿ, ಶ್ರೀನಿವಾಸ, ಡಿ.ಅಶ್ವತ್ಥ್, ಎಂ.ಓಂಕಾರ್, ಡಿ.ಆಕಾಶ, ಎನ್.ಮಂಜುನಾಥ ಶೇಟ್, ವಿ.ಸತೀಶ, ಜಿ.ಪ್ರವೀಣ್, ಆರ್.ಅಣ್ಣಪ್ಪ, ಡಿ.ಅಕ್ಷಯ, ಎಂ.ಅಣ್ಣಪ್ಪ, ಪಿ.ನಿಲೇಶ್, ಪಿ.ಹರ್ಷ, ಸಂತೋಷ್ ಗೌಡ, ಎಂ.ಸುಧಾಕರ್ ಹಾಗೂ ಸೀ ಪಾತ್ರಧಾರಿಗಳಾಗಿ ಎಸ್.ಸಂದೀಪ, ಆಕಾಶ್ ಡಿ.ನಾಯ್ಕ, ಎಲ್.ಮಂಜುನಾಥ್, ಅಮೋಘ ಶೇಟ್ ಅಭಿನಯ ಸಾರ್ವಜನಿಕರ ಮೆಚ್ಚುಗೆ ಪಾತ್ರವಾಯಿತು.