ಗೋಕರ್ಣದಲ್ಲಿ ಆಕರ್ಷಕ ನಾಟ್ಯ ವೈವಿಧ್ಯ

GKN Dance
Published on

ಗೋಕರ್ಣ: ಇಲ್ಲಿನ ಮೈತ್ರೇಯಿ ನೃತ್ಯಕಲಾ ಟ್ರಸ್ಟ್ ದಶಮಾನೋತ್ಸವ ನಿಮಿತ್ತ ಸಮುದ್ರ ತೀರದ ವಿಶೇಷ ಸಭಾಂಗಣದಲ್ಲಿ ಎರಡು ದಿನ ಆಯೋಜಿಸಲಾದ ಸಮಾರಂಭದಲ್ಲಿ ನೃತ್ಯ ಶಾಲೆಯ ವಿದ್ಯಾರ್ಥಿಗಳು ಮತ್ತು ವಿವಿಧ ಕಡೆಗಳಿಂದ ಆಗಮಿಸಿದ ಕಲಾವಿದರು ಪ್ರಸ್ತುತ ಪಡಿಸಿದ ನೃತ್ಯ ವೈವಿಧ್ಯ ಪ್ರೇಕ್ಷಕರ ಶ್ಲಾಘನೆಗೆ ಪಾತ್ರವಾಯಿತು.

ಮೈತ್ರೇಯಿ ನೃತ್ಯಶಾಲಾ ವಿದ್ಯಾರ್ಥಿಗಳಿಂದ ವಿದುಷಿ ಸೌಮ್ಯಾ ಪ್ರದೀಪ ಹೆಗಡೆ ನೇತೃತ್ವದಲ್ಲಿ ಬಾಲರಾಮಾಯಣ ನೃತ್ಯ ರೂಪಕ ಮತ್ತು ಭರತನಾಟ್ಯ ನಡೆಯಿತು. ಸ್ನೇಹಶ್ರೀ ಹೆಗಡೆ ಶಿರಸಿ, ಪಿ.ಜಿ. ಪನ್ನಗ ರಾವ್ ಉಡುಪಿ, ವಿದುಷಿ ಡಾ.ಪೂಜಾ ಲೋಕೇಶ್ ಇವರಿಂದ ಭರತ ನಾಟ್ಯ, ವಿದುಷಿ ಅನುರಾಧಾ ಹೆಗಡೆ ಶಿರಸಿ, ವಿದುಷಿ ವಿಜಯಲಕ್ಷ್ಮೀ ಹೆಗಡೆ ಕಂಪ್ಲಿ ಮತ್ತು ವಿದ್ವಾನ್ ಜಿ.ವಿ.ಜನಾರ್ದನ ಭಟ್ಟ, ವಿದುಷಿ ಸಮುದ್ಯತಾ ಭಟ್ಟ ಮತ್ತು ವಿದುಷಿ ಸಮನ್ವಿತಾ ಭಟ್ಟ ಹಾಗೂ ಶಿಷ್ಯವೃಂದದವರಿಂದ ರೂಪಕಗಳು ಆಯೋಜಿತವಾದವು.

ಜತೆಗೆ ಭವ್ಯ ಕೆ.ಭಟ್ಟ ಶಿರಸಿ ಅವರಿಂದ ಹಿಂದುಸ್ತಾನಿ ಸಂಗೀತ ಹಾಗೂ ಅಶ್ವಿನಿ ಕೊಂಡದಕುಳಿ, ಮಯೂರಿ ಉಪಾಧ್ಯಾಯ, ನಿರ್ಮಲಾ ಹೆಗಡೆ ಗೋಳಿಕೊಪ್ಪ, ಸೌಮ್ಯಾ ಪ್ರದೀಪ ಹೆಗಡೆ ಮತ್ತು ಸಹಕಲಾವಿದರು ನಡೆಸಿಕೊಟ್ಟ ಮಾರುತಿ ಪ್ರತಾಪ ಯಕ್ಷಗಾನ ಕಲಾ ರಸಿಕರು ದಶಮಾನ ಸಂಭ್ರಮವನ್ನು ಸದಾ ನೆನಪಿಡುವಂತೆ ಮಾಡಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net