ಫಸಲ್‌ಬೀಮಾ,ಬೆಳೆಪರಿಹಾರಕ್ಕೆ ತೊಡಕು ನಿವಾರಿಸುವಂತೆ ಆಗ್ರಹಿಸಿ ಮನವಿ

CTD 18 RITARTU-01
Published on

ಚಿತ್ರದುರ್ಗ: ಕರ್ನಾಟಕ ಗ್ರಾಮೀಣ ಬ್ಯಾಂಕ್‌ಗಳಲ್ಲಿ ಖಾತೆ ಹೊಂದಿರುವ ನೂರಾರು ರೈತರು ಸರ್ಕಾರದಿಂದ ಬಿಡುಗಡೆಯಾಗಿರುವ ಬೆಳೆ ಪರಿಹಾರ ಹಾಗೂ ಫಸಲ್‌ಬೀಮಾ ಯೋಜನೆ ಹಣ ಪಡೆಯಲು ಆಗುತ್ತಿಲ್ಲವೆಂದು ಆರೋಪಿಸಿ ರಾಜ್ಯರೈತ ಸಂಘ ಹಸಿರುಸೇನೆ ಕಾರ‌್ಯಕರ್ತರು ಲೀಡ್ ಬ್ಯಾಂಕ್ ಮಾನ್ಯೇಜರ್ ಚಂದ್ರಯ್ಯ ಹಿರೇಮಠ್ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.

ಹೊಳಲ್ಕೆರೆ ತಾಲೂಕಿನ ಪಾಪಣ್ಣ, ಕರಿಯಮ್ಮ ಅವರು, ಉಪ್ಪರಿಗೇನಹಳ್ಳಿ ಹಾಗೂ ಎಚ್.ಡಿ.ಪುರದಲ್ಲಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ್ ಶಾಖೆಗಳಲ್ಲಿ ಹಣ ಡ್ರಾ ಮಾಡಿಕೊಳ್ಳಲು ಆಗದೆ ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ದೂರಿದರು. ರೈತರನ್ನು ಸತಾಯಿಸಿಬೇಡಿ ಎಂ ದು ಮುಖ್ಯ ಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಸೂಚಿಸಿದ್ದರೂ ಅಧಿಕಾರಿಗಳು ಸೊಪ್ಪು ಹಾಕುತ್ತಿಲ್ಲವೆಂದು ಆಕ್ರೋಶ ವ್ಯಕ್ತ ಪಡಿ ಸಿದ ರೈತರು,ಸಮಸ್ಯೆ ನಿವಾರಿಸದಿದ್ದರೆ ಬ್ಯಾಂಕ್‌ಗಳಿಗೆ ಬೀಗ ಹಾಕಿ ಪ್ರತಿಭಟಿಸುವುದಾಗಿ ಎಚ್ಚರಿಸಿದರು.

ಸಂಘದ ಜಿಲ್ಲಾಧ್ಯಕ್ಷ ಇ.ಎನ್.ಲಕ್ಷ್ಮಿಕಾಂತ,ಆರ್.ಶ್ರೀಧರರೆಡ್ಡಿ,ಎಸ್.ಕೆ.ತಿಪ್ಪೇಸ್ವಾಮಿ,ಪರಮಶಿವಮೂರ್ತಿ,ಜಿ.ಆರ್.ತಿಪ್ಪೇಸ್ವಾಮಿ, ಜಿ.ಬಿ.ಪಾಪಯ್ಯ, ತಿಪ್ಪೇಸ್ವಾಮಿ, ಎಂ.ಎಸ್.ಮಂಜಣ್ಣ,ಕೆ.ಎಂ.ಕಾಂತರಾಜು, ಚಂದ್ರಣ್ಣ, ಮಂಜಪ್ಪ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net