ಫಸಲ್ ಬಿಮಾ ಪರಿಹಾರ ಪಾವತಿಗೆ ಆಗ್ರಹ; ರೈತರ ಪ್ರತಿಭಟನೆ

Fasal Bima, Chitradurga, Raitha Sangha,
Published on

ಚಿತ್ರದುರ್ಗ: ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಕಡಲೆ ಮತ್ತಿತರ ಬೆಳೆಗಳಿಗೆ ವಿಮಾ ಪರಿಹಾರ ಪಾವತಿಗೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ (ಹುಚ್ಚವ್ವನಹಳ್ಳಿ ಮಂಜುನಾಥ್) ಕಾರ್ಯಕರ್ತರು ಡಿಸಿ ಕಚೇರಿ ಪ್ರತಿಭಟನೆ ನಡೆಸಿದರು.

ಜಂಟಿ ಕೃಷಿ ನಿರ್ದೇಶಕರ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದರು. 2021-22ನೇ ಸಾಲಿನ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಕಡಲೆ ಇತ್ಯಾದಿ ಬೆಳೆಗಳಿಗೆ ಇನ್ನೂ ವಿಮೆ ಹಣ ರೈತರ ಖಾತೆಗೆ ಜಮಾ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲೆಯ ಸಾವಿರಾರು ಕಡಲೆ ಬೆಳೆಗಾರರು ವಿಮೆ ಪಾವತಿಸಿದ್ದಾರೆ. ಹಾಗಿದ್ದರೂ ವಿಮಾ ಕಂಪನಿಗಳು ವಿಮೆ ಮೊತ್ತ ಪಾವತಿಸದೆ ಸತಾಯಿಸುತ್ತಿವೆ. ರೈತರನ್ನು ವಂಚಿಸಲಾಗಿದೆ ಎಂದು ಆರೋಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net